Tuesday, August 11, 2026
Homeಜಿಲ್ಲಾಸುದ್ದಿಜಯಪುರ: ಶೌರ್ಯ ದಿನದ ಅಂಗವಾಗಿ ರಾಮ ಸಂಗಮ ಕಾರ್ಯಕ್ರಮ: ನೂರಾರು ರಾಮಭಕ್ತರು ಭಾಗಿ!

ಜಯಪುರ: ಶೌರ್ಯ ದಿನದ ಅಂಗವಾಗಿ ರಾಮ ಸಂಗಮ ಕಾರ್ಯಕ್ರಮ: ನೂರಾರು ರಾಮಭಕ್ತರು ಭಾಗಿ!

Telegram Group
Join Now

ಜಯಪುರ: ಗುಬ್ಬಿಬೈಲಿನಲ್ಲಿ ಶನಿವಾರ ಸಂಜೆ ಶೌರ್ಯ ದಿನದ ಅಂಗವಾಗಿ ರಾಮ ಸಂಗಮ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ರಾಮ ಭಕ್ತರು ಪಾಲ್ಗೊಂಡು ಅಯೋಧ್ಯಾ ಹೋರಾಟದ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಕಾರಸೇವಕರಾದ ಅರವಿಂದ್ ಅವರು ರಾಮ ಭಕ್ತರ ಗೌರವ ಸ್ವೀಕರಿಸಿ, 1990-92 ರ ಕಾರಸೇವೆಯ ಅನುಭವನ್ನು ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ವಕ್ತಾರರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಶಾರೀರಿಕ್ ಪ್ರಮುಖರಾದ ಆದಿತ್ಯ ಹರಿಹರಪುರ ಅವರು ಮಾತನಾಡಿ ಈ ರಾಷ್ಟ್ರದ ಆದರ್ಶ ರಾಮ, ಅವನ ಜನ್ಮ ಸ್ಥಳದಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟ ಯಾವ ಹಿಂದೂವೂ ಮರೆಯಬಾರದು ಹಾಗೂ ಮುಂದಿನ ಪೀಳಿಗೆ ಮುಟ್ಟಿಸುವ ಜವಾಬ್ದಾರಿಯೂ ನಮ್ಮದಿದೆ ಎಂದರು.

ಗುಬ್ಬಿಬೈಲಿನ ನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂದೇಶ, ಕುಮಾರ್, ರವಿ, ಸದಾ, ಪೂರ್ಣೇಶ್, ಲೋಕೇಶ್, ಮನೋಜ್, ಶಿವು, ಸಮರ್ಥ್, ಅಂಕಿತ್, ಮಲ್ಲಿಕಾ ಕೃಷ್ಣಮೂರ್ತಿ, ಹಾಗೂ ಮತ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments