Wednesday, March 25, 2026
Homeಕ್ರೈಮ್ಸಕಲೇಶಪುರ: ಚಲಿಸುತ್ತಿದ್ದ ಡಸ್ಟರ್ ಕಾರಿಗೆ ತಗುಲಿದ ಬೆಂಕಿ:ಪ್ರಾಣಾಪಾಯದಿಂದ ದಂಪತಿ ಪಾರು!

ಸಕಲೇಶಪುರ: ಚಲಿಸುತ್ತಿದ್ದ ಡಸ್ಟರ್ ಕಾರಿಗೆ ತಗುಲಿದ ಬೆಂಕಿ:ಪ್ರಾಣಾಪಾಯದಿಂದ ದಂಪತಿ ಪಾರು!

ಸಕಲೇಶಪುರ: ಚಲಿಸುತ್ತಿದ್ದ ಡಸ್ಟರ್ ಕಾರಿಗೆ ಬೆಂಕಿ ತಗುಲಿ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಂಜ್ರಾಬಾದ್ ದರ್ಗಾ ಸಮೀಪ ಶನಿವಾರ ನಡೆದಿದೆ.

ಬೆಂಗಳೂರು ನಿವಾಸಿಗಳಾದ ನವೀನ್ (32) ಮತ್ತು ಮಾನಸ(28) ಅಪಾಯದಿಂದ ಪಾರಾದ ದಂಪತಿ. ಧರ್ಮಸ್ಥಳ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ, ಕಾರಿನ ಹಿಂದಿನ ಚಕ್ರ ಪಂಕ್ಚರ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ತುರ್ತಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!