ಸಕಲೇಶಪುರ: ಶಾಸಕ ಸಿಮೆಂಟ್ ಮಂಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿರುವ ಕುರಿತಂತೆ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಶನಿವಾರದಂದು ಹಾಸನ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಶಾಸಕರು ಅಧಿಕಾರಿಗಳು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದ್ದರು.
ಈ ಭಾಷಣದ ತುಣುಕನ್ನು Hassan News ಹಾಸನ್ ನ್ಯೂಸ್ ಫೇಸ್ಬುಕ್ ಪೇಜ್ ನಲ್ಲಿ ಬಿತ್ತರಿಸಲಾಗಿತ್ತು. ಸದರಿ ಪೇಜ್ ನಲ್ಲಿ vasanth kumar ಎಂಬ ಹೆಸರಿನ ಫೇಸ್ ಬುಕ್ ಖಾತೆಯುಳ್ಳ ವ್ಯಕ್ತಿಯು ಮಾನ್ಯ ಶಾಸಕರ ವಿರುದ್ಧ “ಸಿಮೆಂಟ್ ಮಂಜಣ್ಣ ಹುಟ್ಟು ಕಳ್ಳನ್ ಮಗ” ಎಂದು ಕಾಮೆಂಟ್ ಮಾಡಿದ್ದು ಈ ರೀತಿಯ ಕಾಮೆಂಟ್ ನಿಂದ ಶಾಸಕರ ಘನತೆಗೆ ದಕ್ಕೆ ಯಾವುದರ ಜೊತೆಗೆ ಕ್ಷೇತ್ರದ ಜನತೆಗೆ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಠಾಣೆಗೆ ಬಾಳ್ಳುಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ. ಎಸ್. ಶಿವಕುಮಾರ್ ದೂರು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಬೆಳಗೋಡು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಮುಖಂಡರಾದ ನವೀನ್ ಶೆಟ್ಟಿ. ಕಿಟ್ಟಿ ಪುಟ್ಟರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
