Monday, August 17, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಾಕೋನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ JDSನ ಕೆ.ಎನ್.ಪುಟ್ಟರಾಜು ಅಧಿಕಾರ ಸ್ವೀಕಾರ

ಮೂಡಿಗೆರೆ: ಮಾಕೋನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ JDSನ ಕೆ.ಎನ್.ಪುಟ್ಟರಾಜು ಅಧಿಕಾರ ಸ್ವೀಕಾರ

Telegram Group
Join Now

ಮೂಡಿಗೆರೆ: ತಾಲೂಕಿನ ಮಾಕೋನನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಜೆಡಿಎಸ್ ಪಕ್ಷದ ಕೆ.ಎನ್. ಪುಟ್ಟರಾಜು ಅವರು ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕ ಸೇವೆ ನೀಡುವುದು ನನ್ನ ದೊಡ್ಡ ಆದ್ಯತೆ ಎಂದು ಹೇಳಿದರು. ರಸ್ತೆ–ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತದ ಮೂಲಕ ಮಕೋನಹಳ್ಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ, ಎಂಬುದಾಗಿ ತಿಳಿಸಿದರು.

ಗ್ರಾಮಸ್ಥರಿಂದಲೂ, ಯುವಕರಿಂದಲೂ ಮತ್ತು ಸದಸ್ಯರಿಂದಲೂ ಅವರಿಗೆ ಆತ್ಮೀಯ ಸ್ವಾಗತ ಲಭ್ಯವಾಯಿತು.
ಗ್ರಾಮದ ಮುಖಂಡರಾದ ಗಬ್ಬಳ್ಳಿ ಚಂದ್ರೇಗೌಡ್ರು, ಅಶ್ವತ್ ಮೂಡುಸಸಿ, ಕಲ್ಲೇಶ್, ಮನು ಮಾಲಹಳ್ಳಿ, ಕೃಷ್ಣೇಗೌಡ್ರು, ಹೂವಪ್ಪ, ಸತ್ಯ ತುದಿಯಾಲ, ನಿಧಿ, ಅನಿಲ್, ಮದನ್, ರಮೇಶ್, ಪ್ರಸನ್ನ, ರೆಹಮಾನ್, ಕಿರಣ್, ಸುಂದರೇಶ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ, ಸೀತು, ಪ್ರಕಾಶ್, ರಮೇಶ್, ಪ್ರಸನ್ನ, ಲೋಲಾಕ್ಷಿ, ರಕ್ಷಿತಾ ಹಾಗೂ ಚುನಾವಣಾಧಿಕಾರಿ ದಯಾವತಿ, ಪಿಡಿಓ ಸುಧೀರ್ ಗೌಡ ಹಂಡಗುಳಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments