ಕುದುರೆಮುಖ ನ್ಯಾಷನಲ್ ಪಾರ್ಕ್ ಸಂತ್ರಸ್ತರ ಸಮಸ್ಯೆ ಬಗ್ಗೆ ಶಾಸಕ ಟಿ.ಡಿ ರಾಜೇಗೌಡ, ನಯನಾ ಮೋಟಮ್ಮ ಅವರು ಬುಧವಾರ ನಡೆದ ವಿಧಾನಸಭೆ ಅಧಿವೇಶದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ತರ ಸಮಸ್ಯೆ ಮುಖ್ಯವಾಗಿ ಅರಣ್ಯ ಹಕ್ಕು ಕಾಯಿದೆ ಜಾರಿ, ಪುನ ಪುನರ್ವಸತಿ, ಪರಿಹಾರ ಮತ್ತು ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರ ಜೀವನೋಪಾಯದ ಸಮಸ್ಯೆಗಳನ್ನು ಒಳಗೊಂಡಿದೆ.
ಅರಣ್ಯ ಇಲಾಖೆಯವರ ಕಿರಿ ಕಿರಿ ಹೆಚ್ಚಾಗಿದೆ ಎಂದ ಶಾಸಕ ಟಿ.ಡಿ ರಾಜೇಗೌಡ ಸೂಕ್ತ ಪರಿಹಾರ ಕೊಡಿ, ಸಂತ್ರಸ್ತರು ಅಲ್ಲಿಂದ ಹೊರಬರುತ್ತಾರೆ. ಈಗಿನ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಕೊಡಬೇಕೆಂದ ಶಾಸಕರು
ಮಲೆನಾಡ ಶಾಸಕರು ಮಾತಾಡುವಾಗ ಸ್ಪೀಕರ್ ಖಾದರ್ ಮಧ್ಯ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಪೀಕರ್ ವಿರುದ್ಧ ಕೆರಳಿದ ಟಿ.ಡಿ ರಾಜೇಗೌಡ, ನಯನಾ ಮೋಟಮ್ಮ ಇದು ತುಂಬಾ ಸೂಕ್ಷ್ಮ ವಿಚಾರ, ಮಾತಾಡೋಕೆ ಅವಕಾಶ ಕೊಡಿ ಮಾತಾಡೋಕೆ ಬಿಡಿ ಎಂದ ಶೃಂಗೇರಿ, ಮೂಡಿಗೆರೆ ಶಾಸಕರು ಹೇಳಿದರು ಆದರೂ ಅವರಿಗೆ ಅವಕಶವನ್ನು ಕೊಡದೆ ಕೂರಿಸಿದ್ದರು .
ಇದರ ನಡುವೆ ಕೊನೆಗೆ ಶಾಸಕರ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉತ್ತರ ನೀಡಿದ್ದು ಬಜೆಟ್ ನಲ್ಲಿ ಪರಿಹಾರ ಘೋಷಣೆ ಮಾಡೋದಾಗಿ ಭರವಸೆ ನೀಡಿದರು.
