Wednesday, March 25, 2026
Homeಜಿಲ್ಲಾಸುದ್ದಿಉಡುಪಿ: ಮಹಿಳಾ ನಿಲಯದಲ್ಲಿ ಅಪರೂಪದ ಮದುವೆ ಸಂಭ್ರಮ: ಧಾರೆ ಎರೆದುಕೊಟ್ಟ ಡಿಸಿ

ಉಡುಪಿ: ಮಹಿಳಾ ನಿಲಯದಲ್ಲಿ ಅಪರೂಪದ ಮದುವೆ ಸಂಭ್ರಮ: ಧಾರೆ ಎರೆದುಕೊಟ್ಟ ಡಿಸಿ

ಉಡುಪಿ: ಹೂವಿನ ಅಲಂಕಾರದಿಂದ ಸಿಂಗಾರಗೊಂಡ ಕಟ್ಟಡ, ರಂಗೋಲಿಯ ಚಿತ್ತಾರ, ನಗುಮೊಗದಿಂದ ಅತಿಥಿಗಳನ್ನು ಸ್ವಾಗತಿಸಿದ ಅಧಿಕಾರಿಗಳು. ಎಲ್ಲರಲ್ಲೂ ಸಂತಸ, ಸಡಗರ. ಇಂತಹ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ.

ಹೌದು, ಮಹಿಳಾ ನಿಲಯದ ನಿವಾಸಿ ಸುಶೀಲಾ ಅವರ ವಿವಾಹವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಮಲ್ಲಪ್ಪ ಅವರ ಪುತ್ರ ನಾಗರಾಜ ಅವರೊಂದಿಗೂ, ಮಲ್ಲೇಶ್ವರಿ ಅವರ ವಿವಾಹವು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡಿನ ಸತೀಶ್ ಪ್ರಭು ಅವರ ಪುತ್ರ ಸಂಜಯ ಪ್ರಭು ಅವರೊಂದಿಗೆ ಶುಕ್ರವಾರ ನೆರವೇರಿತು.


ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ವಧುಗಳನ್ನು ಧಾರೆ ಎರೆದುಕೊಟ್ಟರು. ಡಿವೈಎಸ್‌ಪಿ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಮತ್ತಿತರರು ಹಿರಿಯರ ಸ್ಥಾನದಲ್ಲಿ ನಿಂತು ಹರಸಿದರು.

ಮೂಲತಃ ಬಳ್ಳಾರಿ ಜಿಲ್ಲೆಯ ಮಲ್ಲೇಶ್ವರಿ ಅವರು 18 ವರ್ಷ ಪೂರ್ಣಗೊಂಡ ನಂತರ ಕಾರವಾರದ ಬಾಲಕಿಯರ ಬಾಲಮಂದಿರದಿಂದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಬಂದಿದ್ದರು. ಸದ್ಯ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಸಂಜಯ್‌ ಪ್ರಭು ಅವರು ಎಂ.ಕಾಂ. ಪೂರೈಸಿದ್ದು, ಬೆಂಗಳೂರಿನ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಶೀಲಾ ಅವರು ಮಹಿಳಾ ನಿಲಯದ ಹುಣಸೆ ಹಣ್ಣು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗರಾಜ್ ಬೆಂಗಳೂರಿನಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸುತ್ತಿದ್ದಾರೆ.


ಮಹಿಳಾ ನಿಲಯದ ನಿವಾಸಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಮಹಿಳಾ ನಿಲಯದಲ್ಲಿ ಇದುವರೆಗೆ 25 ನಿವಾಸಿಗಳ ಮದುವೆ ನಡೆದಿದ್ದು, ಇದು 26 ಮತ್ತು 27ನೇ ವಿವಾಹ ಸಮಾರಂಭವಾಗಿದೆ’ ಎಂದು ಎಂದು ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!