Tuesday, February 10, 2026
Homeಕ್ರೈಮ್ಮೂಡಿಗೆರೆ: ಕಾಫಿನಾಡಲ್ಲಿ ಇದೆಂಥಾ ಕ್ರೌರ್ಯ?: ಯುವತಿ ತಲೆ ಹಿಡಿದು ರಸ್ತೆಯಲ್ಲಿ ಥಳಿಸಿದ ಯುವಕ!

ಮೂಡಿಗೆರೆ: ಕಾಫಿನಾಡಲ್ಲಿ ಇದೆಂಥಾ ಕ್ರೌರ್ಯ?: ಯುವತಿ ತಲೆ ಹಿಡಿದು ರಸ್ತೆಯಲ್ಲಿ ಥಳಿಸಿದ ಯುವಕ!

ಮೂಡಿಗೆರೆ: ಕಾಫಿನಾಡು ಚಿಕ್ಕಮಗಳೂರಲ್ಲಿ ಇದೆಂಥಾ ಕ್ರೌರ್ಯ..? ಈ ಸ್ಟೋರಿಯನ್ನ ನೋಡ್ತಾ ಇರುವ ಪ್ರತಿಯೊಬ್ಬರಲ್ಲೂ ಈ ಪ್ರಶ್ನೆ ಮೂಡೇ ಮೂಡುತ್ತೆ.. ಕಾರಣ, ಇದೊಂದು ವೀಡಿಯೋ.

ಮನೆ ಭೋಗ್ಯ ಸಂಬಂಧ ಇಬ್ಬರ ನಡುವೆ ನಡೆದ ಗಲಾಟೆಗೆ ಸಾಕ್ಷಿಯಾಗಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಬೀಜುವಳ್ಳಿಯಲ್ಲಿ ನಡೆದಿದೆ.

ಆರೋಪಿ ಅರುಣ್​​ ಎಂಬಾತ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಬೀನ ಎಂಬುವವರು ಅರುಣ್​​ ತಾಯಿಯಿಂದ ಮನೆ ಭೋಗ್ಯಕ್ಕೆ ಪಡೆದಿದ್ದರು. ಈ ಸಂಬಂಧ ಹಣದ ವಿಚಾರವಾಗಿ ಸಬೀನ ಮತ್ತು ಅರುಣ್​​ ನಡುವೆ ನಿತ್ಯವೂ ಗಲಾಟೆ ನಡೆಯುತ್ತಿತ್ತು.

ಈ ಕುರಿತ ಪ್ರಕರಣ ಸಂಬಂಧ ಸಾಕ್ಷಿಯಾಗಿ ಬೇಬಿ ಮತ್ತು ಆಕೆಯ ಪುತ್ರಿ ಸಹಿ ಮಾಡಿದ್ದರು. ಸಬೀನ ಅವರ ಮನೆ ಪಕ್ಕವೇ ಇವರೂ ವಾಸವಿದ್ದು, ಮನೆಯ ಮುಂದೆ ನಿಂತಿದ್ದ ಯುವತಿಯನ್ನ ಎಳೆದು ಚರಂಡಿಗೆ ಹಾಕಿರುವ ಅರುಣ್​​, ಅಟ್ಟಾಡಿಸಿ ಹೊಡೆದಿದ್ದಾನೆ.

ಸಬೀನಾ ಅವರ ಮೇಲೂ ಹಲ್ಲೆ ನಡೆದಿದ್ದು, ಒಟ್ಟು ಮೂವರು ಯುವಕರು ದಾಳಿ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!