Tuesday, August 11, 2026
Homeಜಿಲ್ಲಾಸುದ್ದಿಆಗುಂಬೆ-ಶೃಂಗೇರಿಯಿಂದ ಉಡುಪಿ ಮೂಲಕ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ: ಹೊಸ ಎನ್.ಹೆಚ್ ನಿರ್ಮಾಣಕ್ಕೆ ಸಂಸದ ಕೋಟ ಪ್ರಸ್ತಾಪ

ಆಗುಂಬೆ-ಶೃಂಗೇರಿಯಿಂದ ಉಡುಪಿ ಮೂಲಕ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ: ಹೊಸ ಎನ್.ಹೆಚ್ ನಿರ್ಮಾಣಕ್ಕೆ ಸಂಸದ ಕೋಟ ಪ್ರಸ್ತಾಪ

Telegram Group
Join Now

ದೆಹಲಿ: ಮಲೆನಾಡು ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತಿದ್ದು, ದಿನನಿತ್ಯ ಸರಣಿ ಅಪಘಾತಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಆಗುಂಬೆ -ಶೃಂಗೇರಿ ಗಡಿಯಿಂದ ಉಡುಪಿ ಮೂಲಕ ಕರಾವಳಿ ವರೆಗೆ ಹೈವೇ ರಚಿಸಬೇಕೆಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ ನಿಯಮ 377ರ ಅನ್ವಯ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದ್ದಾರೆ. ಇದರಿಂದ ಮಲೆನಾಡು -ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಾಗಲಿದೆ.ಚಿಕ್ಕಮಗಳೂರುನಿಂದ ಕರಾವಳಿವರೆಗೆ ಕರಾವಳಿ-ಮಲೆನಾಡು ಕರ್ನಾಟಕ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂದು ಕೋಟ ಉಲ್ಲೇಖಿಸಿದ್ದಾರೆ.

ಆಗುಂಬೆ (ಎನ್.ಹೆಚ್169ಎ) ಶೃಂಗೇರಿ, ಅಗಲಗುಂಡಿ, ಜೈಪುರ, ಬಾಳೆಹೊನ್ನೂರು, ಹೈರಂಬಿ, ಆಲ್ದೂರು, ನಾಡಿಪುರ, ಚಿಕ್ಕಮಗಳೂರು ಸಂಪರ್ಕದ ಸರಿ ಸುಮಾರು 120 ಕಿ.ಮೀ ಪಿ.ಡಬ್ಲ್ಯೂ.ಡಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡಬೇಕೆಂದು, ಇದರಿಂದ ಶೃಂಗೇರಿಯಂತಹ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತಾದಿಗಳಿಗೆ ಹಾಗೂ ಕೃಷಿ ಪ್ರದೇಶದಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಕೋಟ ಉಲ್ಲೇಖಿಸಿದ್ದಾರೆ.

ಅಲ್ಲದೆ, ಕುಂದಾಪುರ, ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ ಶೃಂಗೇರಿ ತಲುಪುವ 88 ಕಿ.ಮೀ ರಸ್ತೆಯನ್ನು ಎನ್.ಹೆಚ್ ಆಗಿ ಘೋಷಿಸಿ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments