ಚಿಕ್ಕಮಗಳೂರು: ತಾಲೂಕು ಆವತಿ ಸಮೀಪದ ಬೆಟ್ಟದ ಮಳಲಿ ಗ್ರಾಮದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸತೀಶ್ ಗೌಡ ಮಾಲೀಕತ್ವದ ಕಾಫಿತೋಟದಲ್ಲಿ (Coffee Estate) ಕಾರ್ಮಿಕ ಕುಟುಂಬವೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರ್ಮಿಕರು ಬೇರೆಯವರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತೇವೆಂದು ಸತೀಶ್ ಗೌಡ ಅವರ ಬಳಿ ಕೇಳಿಕೊಂಡಿದ್ದರು. ಈ ವೇಳೆ ಸತೀಶ್ ಗೌಡ ನಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಸ್ ನೀಡುವಂತೆ ತಾಕೀತು ಮಾಡಿದ್ದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತೋಟದಲ್ಲಿ ಕಾರ್ಮಿಕರಿಗೆ ದೌರ್ಜನ್ಯ ನಡೆಸಿದ್ದು ಮುಂಗಡ ಹಣವನ್ನು ವಾಪಸ್ ನೀಡುವಂತೆ ತಾಕೀತು ಮಾಡಿದ ಸಂದರ್ಭ ಮಾತಿನ ಚಕಮಕಿ ನಡೆದಿದೆ ಕೋಪಗೊಂಡ ಮಾಲೀಕ ಹಲ್ಲೆ ನಡೆಸಿದ್ದಾಗಿ ಕೂಲಿ ಕಾರ್ಮಿಕರು ತಿಳಿಸಿದ್ದಾರೆ.
ತೋಟದ ಕೆಲಸಕ್ಕೆ ಬರಲಿಲ್ಲ ಎಂಬ ವಿಚಾರಕ್ಕೆ ಕುಪಿತಗೊಂಡ ಕಾಫಿ ತೋಟದ ( Coffee Estate ) ಮಾಲೀಕ, ಕೆಲಸಗಾರರ ಮೇಲೆ ಹಲ್ಲೆಮಾಡಿ, ಅವರೊಂದಿಗೆ ಅಮಾನವೀಯವಾಗಿ ವರ್ತಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ವೇಳೆ ಸತೀಶ್ ನಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಸ್ ನೀಡುವಂತೆ ತಾಕೀತು ಮಾಡಿದ್ದ. ಸ್ವಲ್ಪ ಸಮಯ ನೀಡಿ, ನಿಮ್ಮಿಂದ ಪಡೆದಿರುವ ಮುಂಗಡ ಹಣವನ್ನು ವಾಪಸ್ ನೀಡಿ ಹೋಗುತ್ತೇವೆ ಎಂದು ಕೂಲಿ ಕಾರ್ಮಿಕರು ಸತೀಶ್ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ಮಾಲೀಕ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೂಡಿಹಾಕಿದ್ದ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಜಗಳ ಬಿಡಿಸಲು ಮುಂದಾದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸತೀಶ್ ಗೌಡ ಅವರ ಮೇಲೆ ಹಲ್ಲೆನಡೆಸಿದ್ದಾನೆ ಹಲ್ಲೆಗೊಳಗಾದ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿದ DSS ಜಿಲ್ಲಾ ಅಧ್ಯಕ್ಷ ಸುಂದ್ರೇಶ್ ಹೊಯ್ಸಳಲು ದಿನಾಂಕ 08/12/2025 ರಂದು ಕೂಲಿಕಾರ್ಮಿಕರಾದ ಲಕ್ಷ್ಮೀ ಕೋಂ ಚೆಲುವ ಎಂಬುವರ ಮೇಲೆ ನಡೆದ ಹಲ್ಲೆ ಖಂಡನೀಯ ಎಂದರು. ಹಾಗೆ ತೋಟದ ಮಾಲಿಕನಾದ ಆವತಿ ಹೋಬಳಿ ಬೆಟ್ಟದಮಳಲಿ ಗ್ರಾಮದ ಸತೀಶ್ ಗೌಡ ಎಂಬಾತನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಓತ್ತಾಯಿಸಿದ್ದಾರೆ.
ಕೂಲಿ ಕಾರ್ಮಿಕರಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ತೋಟದ ಮಾಲಿಕರಿಂದ ಹಲ್ಲೆ ಹೆಚ್ಚುತ್ತಿದ್ದೂ ಕಾನೂನಿಗೆ ಹೆದರದೆ ಬಡಕೂಲಿ ಕಾರ್ಮಿಕರಿಗೆ ಮೇಲೆ ಹಲ್ಲೆ ಮಾಡುತ್ತಿರುವುದು ಮಾಲೀಕರ ದುರಹಂಕಾರದ ಪರಮಾವಧಿ ಎಂದರು.
ಮುಂದಿನ ದಿನದಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಷ್ಟು ವರ್ಷಗಳಾದರೂ ಇನ್ನೂ ಅಸಮಾನತೆ ಎದ್ದು ಕಾಣುತ್ತಿರುವುದು ನೋವಿನ ಸಂಗತಿ ಎಂದರು
