Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಾರ್ಚ್ 1ಕ್ಕೆ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ!

ಮೂಡಿಗೆರೆ: ಮಾರ್ಚ್ 1ಕ್ಕೆ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ!

ಮೂಡಿಗೆರೆ: ಮಳೆಯನಾಡು ಮಲೆನಾಡು ಜಿಲ್ಲೆಗಳಲ್ಲಿ ಒಂದಾದ ಹೊಯ್ಸಳರು ಆಳಿದ ಮೂಡಿಗೆರೆ ತಾಲ್ಲೂಕಿನ ಸುಂದರವಾದ ಕಾಮನ ಬಿಲ್ಲಿನ ಸೊಬಗು. ಮಲೆನಾಡು ಹೆಣ್ಣ ಮೈ ಬಣ್ಣ ನಡು ಸಣ್ಣ ಎಂಬ ಕಣ್ಣು ಸೆಳೆಯುವ ನಡುಗೆ… ಅಬ್ಬಾಬ್ಬಾ ಜುಳು ಜುಳು ಎಂದು ಹರಿಯುವ ಹೇಮಾವತಿ ನದಿಯ ತಡದಲ್ಲಿರುವ ಊರೇ ನಮ್ಮ ಮೂಡಿಗೆರೆ..

ಅಪ್ಪಟ್ಟ ಮಲೆನಾಡಿನ ಸೊಬಗಿನ ಸಿರಿಯನ್ನು ಹೊಂದಿರುವ ಈ ಗ್ರಾಮದಲ್ಲಿ ರಾಜಕೀಯ ಪ್ರತಿಷ್ಟೇಯ ತವರೂರು ಆಗಿರುವ ಡೆಲ್ಲಿಯಲ್ಲಿ ಪ್ರಖ್ಯಾತಿ ಪಡೆದ ಊರು ದಾರದಹಳ್ಳಿ ಗ್ರಾಮದ ಒಟ್ಟು ಜನಸಂಖ್ಯೆ 748 ಮತ್ತು ಈ ಗ್ರಾಮದಲ್ಲಿರುವ ಮನೆಗಳ ಸಂಖ್ಯೆ ಸರಿ ಸುಮಾರು 180. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಅಲ್ಲಿನ ಜನಸಂಖ್ಯೆಯಲ್ಲಿ ಅರ್ಧಕ್ಕೂ ತುಸು ಹೆಚ್ಚಾಗಿಯೇ (54.7) ಇರುವ ಈ ಪ್ರಮೀಳಾ ಪ್ರಧಾನ ಗ್ರಾಮದ ಸಾಕ್ಷರತಾ ಪ್ರಮಾಣ 76.0% ಅದರಲ್ಲೂ ಮಹಿಳಾ ಸಾಕ್ಷರತಾ ಪ್ರಮಾಣ 35.7% ಎಂದರೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.

ಹೌದು.. ಈ ಗ್ರಾಮವಷ್ಟೇ ಅಲ್ಲ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು, ಕೊಣಗೆರೆ, ಬಿಳ್ಳೂರು, ಕೆಸವಳಲು, ಅಬಚೂರು, ಹಾಲೂರು ಇನ್ನು ಮುಂತಾದ ಗ್ರಾಮಗಳಲ್ಲದೆ ಸುತ್ತಮುತ್ತಲಿನ ಸುಮಾರು ಹತ್ತು ಕಿಲೋಮೀಟರ್ ಗಿಂತ ದೂರದ ಗ್ರಾಮಗಳಾದ ಹೊಸಕೆರೆ, ಬೈರಾಪುರ, ಸತ್ತಿಗನಹಳ್ಳಿ ಸೇರಿ ಇನ್ನು ಮುಂತಾದ ಗ್ರಾಮದ ಆ ಕಾಲದ ಯುವಕ ಯುವತಿಯರು ವಿದ್ಯಾಭ್ಯಾಸಕ್ಕಾಗಿ ನಡೆದು ಬಂದು ಕಲಿತು ಬೆಳೆದ ಈ ಶಾಲೆಯಲ್ಲಿ ಕಳೆದ ಅವಿಸ್ಮರಣೀಯ ಮೆಲುಕು ಹಾಕಲು ವೇದಿಕೆ ಸಿದ್ದವಾಗಿದೆ. ಈ ವೇದಿಕೆನ ಅಚ್ಚುಕಟ್ಟಾಗಿ ನಿರ್ಮಿಸಿ ನಿಭಾಯಿಸಿ ಇತಿಹಾಸ ಬರೆಯುವ ಜವಾಬ್ದಾರಿಯು ನಮ್ಮದೇ ಇದೆ.

ಈ ಗ್ರಾಮದಲ್ಲಿ ಈ ಪ್ರಮಾಣದ ಅಚ್ಚರಿಯ ಸಾಕ್ಷರತಾ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎಂದರೆ, ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದರೂ ತಪ್ಪಾಗದು. ದಾಖಲೆಗಳ ಪ್ರಕಾರ ಈ ಶಾಲೆ ಜುಲೈ 1, 1924 ಕ್ಕಿಂತ ಮುಂಚೆ ಆರಂಭವಾಗಿ ಪ್ರಸ್ತುತ ಬರೊಬ್ಬರೀ ನೂರು ವರ್ಷಳನ್ನು ಪೂರೈಸಿ 101ನೇ ವರ್ಷದತ್ತ ಧಾಪುಗಾಲು ಹಾಕಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅಂದಿನ ಮೈಸೂರು ಸಂಸ್ಥಾನದ ರಾಜರುಗಳ ಕೊಡುಗೆ ಅಪಾರವಾಗಿದೆ. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅವರ ಸಂಸ್ಥಾನದ ಎಲ್ಲಾ ಕಡೆಗಳಲ್ಲೂ ಶಾಲೆಗಳನ್ನು ಆರಂಭಿಸುವ ಅಭಿಯಾನ ಪ್ರಾರಂಭವಾಗಿ ಅವರ ಕಾಲದಲ್ಲಿ ಸುಮಾರು 6000 ಶಾಲೆಗಳು ಆರಂಭವಾಯಿತು ಎನ್ನಲಾಗಿದ್ದು ಬಹುಶಃ ಅದೇ ಯೋಜನೆಯಡಿಯಲ್ಲಿ ಆರಂಭವಾದ ಶಾಲೆಗಳಲ್ಲಿ ಈ ದಾರದಹಳ್ಳಿ ಶಾಲೆಯೂ ಒಂದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದ್ದು, ಈಗಲೂ ಅವಶ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಸರಕಾರಿ ಶಾಲೆಗಳಲ್ಲಿ ಒಂದಾಗಿದೆ.

ಮಹಾರಾಜರ ಒತ್ತಾಸೆಗೆ ಸ್ಥಳೀಯರೂ ಕೈ ಜೋಡಿಸಿದ ಕಾರಣ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆಗೆ ಶಾಶ್ವತವಾದ ಸೂರನ್ನು ಕಟ್ಟಿಕೊಟ್ಟ ಕೀರ್ತಿ ಇಲ್ಲಿನ ದಾನಿಗಳ ಕುಟುಂಬಕ್ಕೆ ಸಲ್ಲುತ್ತದೆ.

ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನ ವಿದ್ಯಾದಾನ ಎಂಬುದನ್ನು ಮನಗಂಡಿದ್ದ , ತಮ್ಮ ಸ್ವಂತ ಜಮೀನಿನಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ಕಟ್ಟಿಸಿಕೊಟ್ಟಿದ್ದ ಶಾಲೆಯ ಕಟ್ಟಡ ನಂತರದ ದಿನಗಳಲ್ಲಿ ಅನೇಕ ದಾನಿಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಈ ಪರಿಯಾಗಿ ದೊಡ್ಡದಾಗಿ ಬೆಳೆದಿದ್ದು, ಈಗಿನ ಆಂಗ್ಲ ಮಾಧ್ಯಮ ಶಿಕ್ಷಣ ಆಕರ್ಷಣೆಯ ನಡುವೆಯೂ ಖಾಸಗೀ ಶಾಲೆಗಳ ಭರಾಟೆಗಳ ಮಧ್ಯೆಯೂ ಈ ಸರ್ಕಾರೀ ಕನ್ನಡ ಶಾಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸುಸ್ಥಿತಿಯಲ್ಲಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ.

ಅಷ್ಟೇ ಅಲ್ಲದೇ ಸರ್ಕಾರೀ ಶಾಲೆಯಾಗಿದ್ದರೂ, ಕನ್ನಡ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿರುವುದು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದೆ.

ಈ ನೂರು ವರ್ಷಗಳಲ್ಲಿ ಜಾತಿ, ಧರ್ಮ, ಮತ, ಗಂಡು, ಹೆಣ್ಣು ಎಂಬ ಯಾವುದೇ ಬೇಧವಿಲ್ಲದೇ ದಾರದಹಳ್ಳಿ ಗ್ರಾಮ ಪಂಚಾಂಯಿತಿ ಅಲ್ಲದೆ ಸುತ್ತಲಿನ ಹತ್ತಾರು ಹಳ್ಳಿಗಳ ಲಕ್ಷಾಂತರ ವಿದ್ಯಾರ್ಧಿಗಳಿಗೆ ಜ್ಞಾನವನ್ನು ನೀಡಿರುವ ಈ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣವನ್ನು ಕಲಿತವರು ಮುಂದೆ ದೊಡ್ಡ ಡಾಕ್ಟರ್, ಇಂಜೀನಿಯರ್, ವಕೀಲರು, ಅಕೌಂಟೆಟ್, ಹಿರಿಯ ಸರ್ಕಾರಿ ಅಧಿಕಾರಿಗಳಾಗಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ.

ಸಮುದ್ರದ ಮುಂದೆ ನಿಂತಿದ್ದರೂ ನಮ್ಮ ಬೊಗಸೆಯಷ್ಟು ನೀರನ್ನು ಮಾತ್ರವೇ ತೆಗೆದುಕೊಳ್ಳಲು ಸಾಧ್ಯ ಎನ್ನುವಂತೆ, ಈ ಶಾಲೆಯಲ್ಲಿ ಕಲಿತ ಕೆಲವರನ್ನು ನೆನಪಿಸಿಕೊಳ್ಳಬೇಕೆಂದರೆ ಇಂದೇ ಆ ನಿಗದಿ ಪಡಿಸಿದ ದಿನಾಂಕ ನೆನಪಲ್ಲಿಟ್ಟು ನೀವು ಬಿಡುವನ್ನು ಮಾಡಿಕೊಳ್ಳಿ.

ಕರ್ನಾಟಕದ ಕಂಡ ಶ್ರೇಷ್ಠ ಸಂಸದರಲ್ಲಿ ಒಬ್ಬರಾಗಿದ್ದ ಡಿ. ಬಿ ಚಂದ್ರೆಗೌಡ ಅಲ್ಲದೆ ಡಿ. ಕೆ. ತಾರಾದೇವಿ ಅವರು ಇದೇ ಶಾಲೆಯಲ್ಲೇ ಕಲಿತವರು. ಅದೇ ರೀತಿ ಕರ್ನಾಟಕ ಕಂಡ ಮಾಜಿ ಮಹಿಳಾ ಸಚಿವೆ ಮೋಟಮ್ಮ ಮತ್ತು ಕಾಫಿ ಬೆಳೆಗಾರರು ಮೂಡಿಗೆರೆ ಜೆಡಿಎಸ್ ಪಕ್ಷದ ಹಿರಿಯ ನಾಯಕ ದಿ. ಉಮಾಪತಿ ಗೌಡ ಅವರು ಸಹಾ ಕಲಿತಿದ್ದೂ ಇದೇ ಶಾಲೆಯಲ್ಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆಯ ಪಾತ್ರ ಇರುತ್ತದೆ ಎಂಬ ಗಾದೆ ಮಾತಿಗೆ ಈ ಎಲ್ಲಾ ಮಹಿಳಾಮಣಿಗಳೇ ಸಾಕ್ಷಿಗಳಾಗಿದ್ದಾರೆ ಎಂದರೂ ತಪ್ಪಾಗದು.

ಅದೇ ರೀತಿ ಇದೇ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯೊಬ್ಬರು ಪ್ರಸ್ತುತವಾಗಿ ಬೆಂಗಳೂರು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು ತಮ್ಮದೇ ಆದ ಕಾರ್ಖಾನೆ ಮೂಲಕ ಮೂಲಕ ಸುಮಾರು 700ಕ್ಕೂ ಅಧಿಕ ಕೆಲಸಗಾರರಿಗೆ ಆಶ್ರಯದಾತರಾಗುವಷ್ಟ್ರ ಮಟ್ಟಿಗೆ ಬೆಳೆದಿದ್ದಾರೆ. ಇನ್ನು ಕನ್ನಡ ಧಾರಾವಾಹಿ ಸಿನಿ ಲೋಕದಲ್ಲಿ ಹೆಸರು ಮಾಡಿರುವ ಮೂಡಿಗೆರೆ ಹೊಸಕೆರೆ ರವಿತೇಜ ಸಹ ಇದೆ ಶಾಲೆಯಲ್ಲಿ ಓದಿದವರು

ಇನ್ನು ಈ ಶಾಲೆಯಲ್ಲಿ ಪಾಠ ಮಾಡಿದ ಅನೇಕ ಶಿಕ್ಷಕರುಗಳು ವರ್ಗಾವಣೆಯಾಗಿ ಬೇರೆ ಊರಿಗಳಿಗೆ ಹೋದರೂ ಸಹಾ ಈ ದಾರದಹಳ್ಳಿ ಮತ್ತು ಅವರ ಕಲಿಸುತ್ತಿದ್ದ ಶಾಲೆಯ ನಂಟನ್ನು ಬಿಟ್ಟಿರಲಾಗದೇ, ಸಮಯ ಸಿಕ್ಕಾಗಲೆಲ್ಲಾ ಬಂದು ಹೋಗುವುದೋ ಇಲ್ಲವೇ ಪರಿಚಯಸ್ಥರ ಬಳಿ ಸಾಲೆಯ ಆಗು ಹೋಗುಗಳ ಕುರಿತಾಗಿ ವಿಚಾರಿಸುತ್ತಾರೆ ಎಂದರೆ ಈ ಶಾಲೆಯ ಆಕರ್ಶಣೆ ಯಾವ ಪರಿ ಎಂದು ಅರ್ಥವಾಗುತ್ತದೆ.

ಹೀಗೆ ಒಂದು ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಶಾಲೆಯನ್ನು ಮುಂದಿನ ಪೀಳಿಗೆಯವರಿಗೂ ಉಳಿಸಿಕೊಂಡು ಹೋಗುವ ಸಂಕಲ್ಪವನ್ನು ತೊಟ್ಟ ಇದೇ ಶಾಲೆಯಲ್ಲಿ ಕಲಿತ ಕೆಲವು ಯುವಕರುಗಳು ಈ ಶಾಲೆಯನ್ನು ಮಾದರೀ ಶಾಲೆಯನ್ನಾಗಿರುವ ನೀಲಿನಕ್ಷೆಯನ್ನು ತಯಾರಿಸಿ ನಾನು ಕಲಿತ ಶಾಲೆಗ ನನ್ನದೊಂದು ಕೊಡುಗೆ ಎಂಬ ಅಭಿಯಾನವನ್ನು ಆರಂಭಿಸಿ, ಶಾಲೆಗೆ ಆವಶ್ಯಕವಿರುವ ವಸ್ತುಗಳ ಪಟ್ಟಿಯನ್ನು ತಯಾರಿಸಿ ಈ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳಿಂದ ಸಹಾಯವನ್ನು ಕೋರುತ್ತಿದ್ದಾರೆ. ಅದಕ್ಕಾಗಿಯೇ ಈ ಹಿಂದೆ ಇದೇ ಶಾಲೆಯಲ್ಲಿ ಓದಿದವರ ಸುಮಾರು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮಾಹಿತಿ ದೊರೆತಿದ್ದು ಅವರೆಲ್ಲರನ್ನೂ ಅವರ ಓದಿದ ವರ್ಷ ಮತ್ತು ಊರಿನ ಅನುಗುಣವಾಗಿ ವಿಂಗಡನೆ ಮಾಡಿದ್ದು ಅವರ ಮೂಲಕ ಅವರೊಂದಿಗೆ ಓದಿದವರ ಮಾಹಿತಿಗಳನ್ನು ಕಲೆಹಾಕಿ ಎಲ್ಲರಿಗೂ ಈ ಮಹತ್ತರ ಕಾರ್ಯದವನ್ನು ತಿಳಿಸಿ ಅವರೆಲ್ಲರೂ ಭಾಗಿಗಳಾಗುವಂತೆ ಕೋರಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ಶೀರ್ಷಿಕೆ ಅಡಿಯಲ್ಲಿ ತಮ್ಮ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ನಿರ್ಧರಿಸಲಾಗಿದೆ.

ಈ ರೀತಿಯಾದ ಶತಮಾನೋತ್ಸವದ ಆಚರಣೆಗೆ ಸುಮಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದು, ಶತಮಾನೋತ್ಸವ ಕಾರ್ಯಕ್ರಮ ಹಣ ಕೊಡುವವರು 50,000 ಮೇಲ್ಪಟ್ಟು ಎಷ್ಟಾದರೂ ತಮ್ಮ ಹೆಸರಿನಲ್ಲಾಗಲೀ ಅಥವಾ ತಮ್ಮ ತಂದೆ ತಾಯಿ, ಇಲ್ಲವೇ ಅಜ್ಜನ ಹೆಸರಿನಲ್ಲಿ ಇಲ್ಲವೇ ಅವರ ಕುಟುಂಬದ ಹೆಸರಿನಲ್ಲಿ ನೀಡಲು ಕೋರಲಾಗಿದೆ. 10 ಸಾವಿರಕ್ಕೂ ಅಧಿಕ ಮೊತ್ತವನ್ನು ಕೊಟ್ಟವರ ಹೆಸರುಗಳನ್ನು ಶಾಶ್ವತವಾಗಿ ಶಾಲಾ ಫಲಕದ ಮೇಲೆ ಹಾಕಿಸಲೂ ಸಹಾ ನಿರ್ಧರಿಸಲಾಗಿದೆ. ಈ ರೀತಿಯಾಗಿ ನೇರವಾಗಿ ಹಣವನ್ನು ನೀಡಲು ಸಾಧ್ಯವಾಗದೇ ಹೋದಲ್ಲಿ, ಶಾಲೆಗೆ ಅಗತ್ಯವಿರುವ ಯಾವುದೇ ವಸ್ತುವನ್ನು ಬೇಕಾದರೂ ನೀಡಬಹುದಾಗಿದೆ. ಇದು ಕೇವಲ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗದೇ, ವಿದ್ಯಾದಾನ ಮಹಾದಾನ ಎಂದು ಪರಿಭಾವಿಸಿ ಇತರೇ ದಾನಿಗಳಿಂದಲು ಸಹಾ ದೇಣಿಕೆಯನ್ನು ಸಂಗ್ರಹಿಸಲು ಕೋರಲಾಗಿದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ಅದು ಎಲ್ಲಿಯಾದರೂ ದುರುಪಯೋಗವಾಗಬಹುದುದು ಎಂಬ ಆತಂಕ ಅನೇಕರಲ್ಲಿ ಮನೆ ಮಾಡಿ, ಅಂತಹವರು ದಾನ ಮಾಡಲು ಹಿಂದೇಟು ಹಾಕಬಹುದು ಎಂಬ ವಿಷಯವನ್ನು ಮನಗಂಡ ಆಯೋಜಕರು, ಈ ವಿಷಯದಲ್ಲಿ ಸಂಪೂರ್ಣವಾದ ಪಾರದರ್ಶಕತೆಯನ್ನು ತಂದಿದ್ದು, ದಾನಿಗಳು ಯಾವೇದೇ ರೀತಿಯಲ್ಲಿ ಕೊಟ್ಟಂತಹ ಹಣ/ ವಸ್ತುಗಳು ದುರುಪಯೋಗ ಆಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು, ನಗದು ರೂಪದ ಬದಲಾಗಿ ನೇರವಾಗಿ ಅಕೌಂಟ್ ಮುಖಾಂತರವೇ ತೆಗೆದುಕೊಳ್ಳುವ ಮೂಲಕ ಪ್ರತಿಯೊಂದು ರೂಪಾಯಿ ಹಣಕ್ಕೂ ಲೆಖ್ಖವನ್ನು ಇಡಲಾಗಿದೆ.

ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ನೀಡಲು ಇದೊಂದು ಸುಸಂದರ್ಭ. ಎಲ್ಲರೂ ಒಟ್ಟಾಗಿ ಸೇರಿದಾಗಲೇ ತಾವು ಓದಿದ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡಿ ಮುನ್ನಡೆಸಲು ಸಾಧ್ಯ ಎಂಬ ಸುಂದರ ಕಲ್ಪನೆಗೆ ಈಗಾಗಲೇ ಅನೇಕ ಹೃದಯವಂತರು ಮುಂದಾಗಿದ್ದು ಯಥಾ ಶಕ್ತಿ ತನು ಮನ ಧನಗಳ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಶಾಲೆಯ ಶತಮಾನೋತ್ಸವ ಆಚರಣಾ ಸಮಿತಿಗೆ ಎಲ್ಲರೀತಿಯ ಸಹಾಯವನ್ನು ನೀಡಲು ಮುಂದಾಗುತ್ತಿದ್ದಾರೆ.ಇನ್ನೂ ಅನೇಕರು ದಾರದಹಳ್ಳಿ ಸುತ್ತಮುತ್ತಲಿನ ಹಳ್ಳಿಗಳ ಹಳೇ ವಿದ್ಯಾರ್ಥಿಗಳ ಮನೆ ಮನೆಗಳಿಗೆ ಈ ಮಹತ್ತರವಾದ ಕಾರ್ಯವನ್ನು ವಿವರಿಸಿದ್ದು ಅವರೆಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರು ಕೊಟ್ಟಂತಹ ದಾನವನ್ನು ಸಂತೋಷದಿಂದ ಸ್ವೀಕರಿಸುವ ತೀರ್ಮಾನ ಮಾಡಿದ್ದಾರೆ ಶಾಲೆಯ ಸಲಹಾ ಸಮಿತಿ

ದಾರದಹಳ್ಳಿ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮವು ಇದೇ 2026ರ ಮಾರ್ಚ್ ತಿಂಗಳ 1 ರಂದು ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣ ಸುಂದರವಾದ ಸಮಾರಂಭವನ್ನು ಆಯೋಜಿಸಿದ್ದಾರೆ. ಈ ಸಮಾರಂಭದಲ್ಲಿ ಶಾಲೆಯ ಮುಂದಿನ ಒಂದು ದಶಕದ ನೀಲ ನಕ್ಷೆಯನ್ನು ಎಲ್ಲರ ಮುಂದೆ ತೆರೆದಿಟ್ಟು ಅದನ್ನು ಸಾಕಾರಗೊಳಿಸಲು ಎಲ್ಲರ ಸಲಹೆ, ಸೂಚನೆಗಳು ಮತ್ತು ಸಹಾಯವನ್ನು ಕೋರುವುದರ ಜೊತೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಒಂದು ಕಡೆ ಒಗ್ಗೂಡಿಸಿ ಅವರ ಸವಿ ಸವಿ ನೆನಪು ಸಾವಿರ ನನಪುಗಳ ಬುತ್ತಿಯನ್ನು ಬಿಚ್ಚಿಡಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಈ ಶಾಲೆಯಲ್ಲಿ ಪಾಠವನ್ನು ಹೇಳಿಕೊಟ್ಟ ಕೆಲವು ಹಿರಿಯ ಶಿಕ್ಷಕರಿಗೆ ಗೌರವ ಸಮರ್ಪಣೆ ಗುರುವಂದನಾ ಕಾರ್ಯಕ್ರಮದ ವಿಚಾರ ಸಂಕೀರ್ಣದ ಜೊತೆಗೆ ಪ್ರಸ್ತುತ ಇದೇ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಈ ಹಿಂದೆ ಕಲಿತಂತಹ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ದಾರದಹಳ್ಳಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಮಯವನ್ನು ನೀಡಿ ಸರ್ಕಾರೀ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ಕೇವಲ 1 ಕೊಠಡಿ. ಮತ್ತು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭಗೊಂಡಿರುವ ಶಾಲೆ ಇಂದು 100 ವರ್ಷಗಳಲ್ಲಿ ಹಲವು ಏಳು ಬೀಳುಗಳ ನಡುವೆಯೂ ಪ್ರಸ್ತುತ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಆಲಯವಾಗಿದೆ. ಇಂದಿನ ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ಸ್ಮಾರ್ಟ್ ಕ್ಲಾಸ್/ಸ್ಮಾರ್ಟ್ ಬೋರ್ಡ್, ಮಕ್ಕಳಿಗೆ ಕುಡಿಯಲು ಶುಧ್ಧೀಕರಿಸಿದ ನೀರು, ಉತ್ತಮ ನೈರ್ಮಲ್ಯ ಹೊದಿರುವ ಶೌಚಾಲಯ, ಒಳ್ಳೆಯ ಪುಸ್ತಕಗಳಿರುವ ಗ್ರಂಥಾಲಯ ಗಣಕಯಂತ್ರಗಳು, ಕೈತೋಟದ ಅಭಿವೃದ್ಧಿ, ಮಕ್ಕಳಿಗೆ ಸುಸಜ್ಜಿತ ಆಟದ ಮೈದಾನ ಹೀಗೆ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಸಾಕಾರ ಗೊಳಿಸುವ ಕನಸನ್ನು ಹೊತ್ತಿದ್ದಾರೆ.

ಇವೆಲ್ಲವೂ ಕೇವಲ ಏಕ್ ದಿನ್ ಕಾ ಸುಲ್ತಾನ ಎನ್ನುವಂತೆ ಕೇವಲ ಶತಮಾನೋತ್ಸವ ದಿನ ಅಥವಾ ವರ್ಷಕ್ಕೆ ಮಾತ್ರವೇ ಸೀಮಿತವಾಗದೇ ಇದೇ ಯೋಜನೆ ಶಾಶ್ವತವಾಗಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಿಂದ ಸಂಪತ್ತು ಎನ್ನುವುದು ಕ್ಷಣಿಕವಾಗಿದ್ದು ಅದು ಒಂದು ಕ್ಷಣದಲ್ಲಿ ಕ್ಷೀಣವಾಗ ಬಹುದು ಅಥವಾ ಯಾರೋ ಕದ್ದೊಯ್ಯಬಹುದು. ಆದರೆ ವಿದ್ಯೆ/ಜ್ಞಾನ ಎಂಬ ಸಂಪತ್ತು ಎಂದಿಗೂ ಕರಗದು ಮತ್ತು ಕದಿಯಲಾಗದು ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಸೇರಿದರೆ ಬಳ್ಳ ಎನ್ನುವ ಮಾತಿನಂತೆ ನಾವೂ ನೀವು ನೀಡುವ ಒಂದೊಂದು ರೂಪಾಯಿಯೂ ಸಹಾ ನಮ್ಮ ಮುಂದಿನ ತಲೆಮಾರಿನ ಮಕ್ಕಳ ಭವಿಷ್ಯಕ್ಕೆ ಹಾಕುವ ಬುನಾದಿಯಾಗುವ ಕಾರಣ, ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡೋಣ ಅಲ್ವೇ? ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಪ್ರಜೆಗಳು ಅವರನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮ ನಿಮ್ಮ ಮೇಲೆಯೇ ಇದೇ ಅಲ್ವೇ?

ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ, ಶ್ರಮದಾನ ವಾದರೂ ಸರಿ ಹಣ ದಾನವಾದರೂ ಸರಿ. ಸಮಯ ದಾನ ಮಾಡೋಣ. ಅಂತಾರೆ ಹಳೇ ವಿದ್ಯಾರ್ಥಿಗಳು.

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!