ಮೂಡಿಗೆರೆ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಬರ್ಬರ ಹತ್ಯೆ ಇಡೀ ಮನುಕುಲಕ್ಕೆ ಮಾಡಿದ ಘೋರ ಅವಮಾನ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಎಂದು 27 ವರ್ಷದ ದೀಪು ಎಂಬಾತನನ್ನು ಜೀವಂತ ಸುಟ್ಟು ಹಾಕಿರುವ ಘಟನೆ ಖಂಡನೀಯ ಎಂದರು
ಈ ಒಂದು ಕೃತ್ಯವನ್ನು ಖಂಡಿಸುವ ಮುಖಾಂತರ ಎಲ್ಲಾ ಸನಾತನ ಹಿಂದೂ ಬಂದವರು ಒಗ್ಗೂಡಬೇಕು ಹಾಗೂ ಭಾರತದಲ್ಲಿ ಅಸ್ಸಾಮಿಗಳು ಎಂದು ಮುಖವಾಡ ಹಾಕಿಕೊಂಡ ಬಾಂಗ್ಲಾದೇಶಿಗರನ್ನು ಒಳ ನುಗ್ಗಿದ್ದು ಇಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕೂಡಲೇ ಬಾಂಗ್ಲಾ ಮುಸ್ಲಿಮರನ್ನು ಭಾರತದಿಂದ ಹೊರ ದಬ್ಬಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದ ಒಳಗೂ ಸಹ ಇಂತಹ ಹೇಯ ಕೃತ್ಯ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು
ಸರ್ಕಾರ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳದಿದ್ದರೆ, ಭಾರತೀಯರಾದ ನಾವುಗಳೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಇಂತಹ ಘಟನೆಗಳಿಗೆ ಮುಂದೆ ಸರ್ಕಾರವೇ ಕಾರಣವಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್ ಜನ್ನಾಪುರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
