Monday, August 17, 2026
Homeಕ್ರೈಮ್ಮೂಡಿಗೆರೆ: ಪಲ್ಸ್ ಪೋಲಿಯೋಗಾಗಿ ಆಶಾ ಕಾರ್ಯಕರ್ತೆಯರಿಂದ ಬಸ್ ಸ್ಟಾಂಡ್ ಸ್ವಚ್ಛತೆ: ಗ್ರಾ. ಪಂ. ಅಧಿಕಾರಿಗಳೇ ನಿಮ್ಮ...

ಮೂಡಿಗೆರೆ: ಪಲ್ಸ್ ಪೋಲಿಯೋಗಾಗಿ ಆಶಾ ಕಾರ್ಯಕರ್ತೆಯರಿಂದ ಬಸ್ ಸ್ಟಾಂಡ್ ಸ್ವಚ್ಛತೆ: ಗ್ರಾ. ಪಂ. ಅಧಿಕಾರಿಗಳೇ ನಿಮ್ಮ ಕೆಲಸವೇನು?

Telegram Group
Join Now

ಮೂಡಿಗೆರೆ: ಇಂದು ದೇಶದ ಮಹತ್ವಪೂರ್ಣದಿನ ನಾವುಗಳು ಆರೋಗ್ಯವಾಗಿ ಇದುವರೆಗೂ ಜೀವಿಸುತ್ತಿದ್ದರೆ ಅದು ಪಲ್ಸ್ ಪೊಲಿಯೋದಿಂದಾಗಿ ಬಸ್‌ ಸ್ಟ್ಯಾಂಡ್‌, ಅಂಗನವಾಡಿ, ಶಾಲೆ ಈ ತರಹದ ಸ್ಥಳಗಳಲ್ಲಿ ಆಶಾಕಾರ್ಯಕರ್ತರು, ಸಂಜೀವಿನಿ ಸಖಿಯರು ಕಾರ್ಯಕರ್ತರು ತುಂಬು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಕಾರ್ಯನಿರ್ವಹಿಸುತ್ತಿರುವ ಸ್ಥಳಗಳು ಇಂತಹ ದಿನವಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಚತೆಯನ್ನು ಮಾಡಿಕೊಡದೇ ಇರುವುದು ತುಂಬಾ ಬೇಸರದ ಸಂಗತಿ.


ಭಾನುವಾರ ಬೆಳಗ್ಗೆ 8:30 ಕ್ಕೆ ಪೋಲಿಯೋ ಲಸಿಕೆಗೆ ಬಸ್‌ ಸ್ಟ್ಯಾಂಡ್‌ ಸ್ಥಳ ನಿಗದಿ ಪಡಿಸಲಾಗಿದ್ದು ಅಂತೆಯೇ ಆಶಾ ಕಾರ್ಯಕರ್ತೆಯರು ಆಗಮಿಸಿ ನೋಡಿದಾಗ ಕಸದ ಕೋಣೆಯಾಗಿ ಕಂಡ ಬಸ್ ಸ್ಟಾಂಡ್ ನೋಡಿ ಬೇಸರ ಮಾಡಿಕೊಳ್ಳುತ್ತಾ ಖುದ್ದಾಗಿ ತಾವೇ ಸ್ವಚ್ಛಗೊಳಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸ್ವಚ್ಛತೆ ಮಾಡಿರುವ ಘಟನೆ ತಾಲೂಕಿನ ಜನ್ನಾಪುರ ವ್ಯಾಪ್ತಿಯ ಚಿನ್ನಿಗದಲ್ಲಿ ನಡೆದಿದೆ

ಈ ಕುರಿತು ಅಳಲನ್ನು ತೋಡಿಕೊಂಡ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಭಾನುವಾರ ಅಧಿಕಾರಿಗಳು ಪೋಲಿಯೋ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕರ್ತವ್ಯ ಪಾಲನೆ ನಮ್ಮ ಜವಾಬ್ದಾರಿ ಈ ದೃಷ್ಟಿಯಲ್ಲಿ ಆಶಾಕಾರ್ಯಕರ್ತರು ಇಂದು ಮುಂಜಾನೆ ಪೊಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗ ಕಸಗಳು, ಉಗಿದ ವಿಮಾಲ್ ಪಾನ್, ಸೇದಿದ ಬೀಡಿ ಸೀಗರೇಟುಗಳನ್ನು ಸ್ವತ: ಪೊರಕೆಯೊಂದಿಗೆ ಬಸ್‌ ಸ್ಟ್ಯಾಂಡ್‌ ಶುಚಿಗೊಳಿಸಿದರೂ. ಗಬ್ಬು ನಾರುವ ಬಸ್‌ ಸ್ಟ್ಯಾಂಡ್‌ ನಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಬೇಸರ ತಂದಿದೆ. ಅಧಿಕಾರಿಗಳು ಇಂತಹ ಸಂಧರ್ಭದಲ್ಲಿ ಒಂದು ದಿನದ ಮುಂಚಿತವಾದರೂ ಸ್ವಚ್ಚತೆಗೆ ಕ್ರಮವಹಿಸಬಾರದಿತ್ತೆ ಎನ್ನುವುದು ಇವರ ನೋವಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments