ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಲ್ಸ್ ಪೊಲಿಯೋ ದಿನವಾದ ಇಂದು ಒಟ್ಟು 81,405 ಮಕ್ಕಳಲ್ಲಿ 76034 ಮಕ್ಕಳಿಗೆ ಪೊಲಿಯೋ ಹನಿ ನೀಡುವ ಮೂಲಕ ಶೇ. 93.40ರಷ್ಟು ಪ್ರಗತಿಯಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ 22,243 ಮಕ್ಕಳಿಗೆ ಪೊಲೀಯೋ ಹನಿನೀಡುವ ಗುರಿಹೊಂದಿದ್ದು,20,9819 ಮಕ್ಕಳಿಗೆ ಪೊಲೀಯೋ ಹನಿಹಾಕುವ ಮೂಲಕ ಶೇ.93.60% ರಷ್ಟು ಪ್ರಗತಿಸಾಧಿಸಿದ್ದರೆ, ಕಡೂರು ತಾಲೂಕಿನಲ್ಲಿ 19,480 ಮಕ್ಕಳಿಗೆ ಪೊಲೀಯೋ ಹನಿನೀಡುವ ಮೂಲಕ ಶೇ.978.66%.ರಷ್ಟು ಪ್ರಗತಿಯಾಗಿದ್ದರೆ,
ತರೀಕೆರೆ ತಾಲೂಕಿಯೋನಲ್ಲಿ 11,193 ಮಕ್ಕಳ ಬದಲಾಗಿ 10501 ಮಕ್ಕಳಿಗೆ ಪೊಲೀಯೋ ನೀಡುವ ಮೂಲಕ ಶೇ. 93.893ರಷ್ಟು ಪ್ರಗತಿಯಾಗಿದೆ. ಅಜ್ಜಂಪುರ ತಾಲೂಕಿನಲ್ಲಿ 5571 ಮಕ್ಕಳಿಗೆ ಪೊಲಿಯೋ ಹನಿನೀಡಲು ತಾಲೂಕು ಆರೋಗ್ಯ ಇಲಾಖೆ ಗುರಿ ಇಟ್ಟುಕೊಂಡಿತ್ತು. ಈ ದಿನ 4921 ಮಕ್ಕಳಿಗೆ ಪೊಲಿಯೋ ಹನಿಹಾಕಿದ್ದು, ಶೇ.88.33ರಷ್ಟು ಪ್ರಗತಿ ಸಾಧಿಸಿದೆ.
ಮಲೆನಾಡು ತಾಲೂಕುಗಳಾದ ಮೂಡಿಗೆರೆ ತಾಲೂಕಿನಲ್ಲಿ 8472 ಮಕ್ಕಳಿಗೆ ಗುರಿಹೊಂದಿದ್ದು,7343 ಮಕ್ಕಳಿಗೆ ಪೊಲೀಯೋ ಹನಿಹಾಕುವ ಮೂಲಕ ಶೇ.86.67 ರಷ್ಟುಪ್ರಗತಿ ಸಾಧಿಸಿದ್ದರೆ, ಕಳಸ ತಾಲೂಕಿನಲ್ಲಿ 2158 ಮಕ್ಕಳ ಬದಲಾಗಿ 1866 ಮಕ್ಕಳಿಗೆ ಹನಿಹಾಕುವುದರೊಂದಿಗೆ ಶೇ.895.40 ಪ್ರಗತಿಯಾಗಿದ್ದರೆ,
ಕೊಪ್ಪದಲ್ಲಿ5200ಕ್ಕೆ ಬದಲಾಗಿದೆ 4898 ಮಕ್ಕಳಿಗೆ ಪೊಲೀಯೋ ಹನಿಹಾಕಿದ್ದು, ಶೇ.94.19 ರಷ್ಟು ಪ್ರಗತಿಯಾಗಿದೆ. ನರಸಿಂಹರಾಜಪುರ ತಾಲೂಕಿನಲ್ಲಿ 4802 ಮಕ್ಕಳಿಗೆ ಪೊಲೀಯೋ ಹನಿಹಾಕುವ ಗುರಿಹೊಂದಿದ್ದು, 4537 ಮಕ್ಕಳಿಗೆ ಪೊಲೀಯೋ ನೀಡುವ ಮೂಲಕ ಶೇ.98.84ರಷ್ಟು ಗುರಿಮುಟ್ಟಿದೆ. ಶೃಂಗೇರಿ ತಾಲೂಕಿನಲ್ಲಿ 1900 ಮಕ್ಕಳಿಗೆ ಬದಲಾಗಿದೆ.1774 ಮಕ್ಕಳಿಗೆ ಪೊಲೀಯೋ ಹನಿಯನ್ನು ತಾಲೂಕು ಆರೋಗ್ಯ ಇಲಾಖೆ ಶೇ.93.37 ರಷ್ಟು ಪ್ರಗತಿಸಾಧಿಸಿದೆ.
ಐದುವರ್ಷದೊಳಗಿನ ಮಕ್ಕಳಿಗೆ ಪೊಲೀಯೋ ಹನಿಹಾಕುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಪೊಲೀಯೋ ಹನಿಹಾಕಲಾಯಿತು. ಬಸ್‌ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪೊಲೀಯೋ ಹನಿಹಾಕಲಾಯಿತು. ಒಟ್ಟು ನಾಲ್ಕು ದಿನಗಳ ಪಲ್ಸ್‌ಪೊಲೀಯೋ ಕಾರ್ಯಕ್ರಮವಿದ್ದು, ಉಳಿದ ಮೂರು ದಿನಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾಕಾರ್ಯಕರ್ತೆಯರು ಮನೆಮನೆಗೆ ಭೇಟಿನೀಡಿ ಬಿಟ್ಟುಹೋಗಿರುವ ಮಕ್ಕಳಿಗೆ ಪೊಲೀಯೋ ಹನಿಹಾಕುವರು.
