ಹಾಸನ: ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಗೆ, ಕಾಕನಮನೆ ಗ್ರಾಮಗಳಲ್ಲಿ ಕಳ್ಳತನ ನಡೆದಿದ್ದು ಬಾಗೆ ಗ್ರಾಮದ ಟೀ ಕ್ಯಾಂಟಿನ್ ನುಗ್ಗಿದ ಮುಸುಕುಧಾರಿ, ಕ್ಯಾಸ್ ಕೌಂಟರ್ ನಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ.
ಆ ಬಳಿಕ ಸಿಕ್ಕ ಸಿಕ್ಕ ವಸ್ತುಗಳನ್ನ ದೋಚಿಕೊಂಡು ಜಾಗ ಖಾಲಿ ಮಾಡಿದ್ದಾನೆ. ಇಂದು ಮುಂಜಾನೆ 3.45ರ ಸಮಯದಲ್ಲಿ ಕಿರಾತಕ ಅಂಗಡಿಗೆ ನುಗ್ಗಿದ್ದು, ಮುಸುಕುಧಾರಿಯ ಚಲನವಲನ ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಟಾರ್ಚ್ ಹಿಡ್ಕೊಂಡು ಹೊಂಚು ಹಾಕುವ ದೃಶ್ಯಗಳು ಸೆರೆಸಿಕ್ಕಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸರು ಮುಸುಕುಧಾರಿಯನ್ನ ಹಿಡಿಯಲು ಬಲೆ ಬೀಸಿದ್ದಾರೆ
