ಮೂಡಿಗೆರೆ:ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘ ಅಧ್ಯಕ್ಷೆಯಾಗಿ ಶ್ರೀಮತಿ ಸಾವಿತ್ರಮ್ಮ ಎಂ.ಬಿ.ಉಪಾಧ್ಯಕ್ಷೆಯಾಗಿ ಶ್ರೀಮತಿ ರಾಧ ಮಂಜುನಾಥ್ ಆಯ್ಕೆ
ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಪಾಧ್ಯಕ್ಷೆ ಸ್ಥಾನ ನೇಮಕ ಪ್ರಕ್ರಿಯೆ ಇಂದು ನಡೆಯಿತು
ಪಟ್ಟಣದ ಮಹಿಳಾ ಪತ್ತಿನ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷೆಯಾಗಿ ನಿವೃತ್ತ ಉಪನ್ಯಾಸಕಿ ಶ್ರೀಮತಿ ಸಾವಿತ್ರಿ ಎಂ.ಬಿ. ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು, ಇದೊಂದು ದೊಡ್ಡ ಜವಾಬ್ದಾರಿ ಸಹಕಾರಿ ಕ್ಷೇತ್ರವನ್ನು ಉನ್ನತ ದರ್ಜೆಗೆ ಕೊಂಡೊಯ್ಯಲು ಶ್ರಮಿಸುವುದಾಗಿ ತಿಳಿಸಿದರು. ಮಹಿಳೆಯರ ಕೈಗೆ ಸಹಕಾರ ಸಂಸ್ಥೆಯ ಜವಾಬ್ದಾರಿ ನೀಡುವುದರಿಂದ ಸಹಕಾರ ಕ್ಷೇತ್ರದ ಘನತೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.
ಸಾಗುವಳಿ ಹೊಂದಿರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಬಡವರ್ಗದವರನ್ನು ಗುರುತಿಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದ್ದು, ಅಂತಹವರ ಷೇರು ಹಣವನ್ನು ಸರ್ಕಾರವೇ ಭರಿಸಿ, ಸಹಕಾರಿ ಸಂಘಗಳ ಸದಸ್ಯರನ್ನಾಗಿ ಮಾಡಲಾಗುವುದು ಎಂದರು.
ಕೃಷಿ, ಮನೆ ದುರಸ್ತಿ, ಕುರಿ ಸಾಕಣೆ, ಪಶು ಸಂಗೋಪನೆಯಂತಹ ಅಭಿವೃದ್ಧಿ ಕೆಲಸಗಳಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಈ ಸಾಲವನ್ನು ಪಡೆದವರು ಸದುಪಯೋಗಪಡಿಸಿಕೊಂಡಲ್ಲಿ ಸಹಕಾರಿ ಕ್ಷೇತ್ರದ ಉದ್ದೇಶ ಈಡೇರಿದಂತಾಗುತ್ತದೆ ಎಂದರು.
ರಾಜಕೀಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರಿಗೆ ಮೀಸಲು ಬೇಕು. ಇತ್ತೀಚೆಗೆ ಸಂವಿಧಾನದ 73ನೇ ವಿಧಿಗೆ ತಿದ್ದುಪಡಿ ತಂದು ಮಹಿಳೆಯರಿಗೆ ಶೇ.50 ಮೀಸಲು ನೀಡಿರುವುದರಿಂದ ರಾಜಕೀಯ ಅಧಿಕಾರದಲ್ಲಿ ತಾರತಮ್ಯಇಲ್ಲದಂತಾಗಿದೆ ಎಂದರು. ಹಿರಿಯರ ಮಾರ್ಗದರ್ಶನ ಮತ್ತು ನಿರ್ದೇಶಕರ ಸಹಕಾರದಿಂದ ಮಹಿಳಾ ಪತ್ತಿನ ಸಂಘದ ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷೆ ರಾಧಾ ಮಂಜುನಾಥ್ ಮಾತನಾಡಿ ಚೈತನ್ಯ ಸಹಕಾರ ಸಂಘಕ್ಕೆ ಪ್ರಾರಂಭಿಕ ಹಂತವಾಗಿ 2000 ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಹೆಚ್ಚಾಗಿ ಬಡವರ್ಗದವರು ಇರುವುದರಿಂದ ಅಂತಹವರ ಷೇರು ಹಣವನ್ನು ಸರಕಾರವೇ ತುಂಬಲು ಮುಂದೆ ಬಂದಿದೆ. ಮಹಿಳೆಯರು ಮುತುವರ್ಜಿ ವಹಿಸಿ ಸಹಕಾರ ಸಂಘದ ಉದ್ದೇಶ ಈಡೇರಿಸಲು ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಚೈತನ್ಯ ಪರಿಶಿಷ್ಟ ಮಹಿಳಾ ಪತ್ತಿನ ನಿರ್ದೇಶಕರಾದ ನೀಲಾ ಅನಂತ್, ತ್ರಿವೇಣಿ ನಿಂಗಯ್ಯ ಬಿ. ಬಿ. ವೆಂಕಮ್ಮ ಹಾಲಯ್ಯ, ಲಕ್ಷ್ಮಿ ರಾಮಯ್ಯ ಸರೋಜ ಚಂದ್ರು ಲೋಲಾಕ್ಷಿ ಸುಂದ್ರೇಶ್ ಸುಶೀಲ ತ್ರಿಪುರ, ಮಾಲತಿ ರವಿ, ಜಾನಕಿ ಲೋಕುವಳ್ಳಿ, ಸೀತಮ್ಮ, ಕಾಳಮ್ಮ, ರತ್ನ,ರೇಣುಕಾ ಕೆಸವಳಲು,ಯಂಕಮ್ಮ,ಪ್ರಮೀಳಾ ಅಣ್ಣಪ್ಪ,ಹಾಲಮ್ಮ ಮತ್ತಿತರರು ಹಾಜರಿದ್ದರು.
ವರದಿ:ಪುನೀತ್ ಕಡಿದಾಳು
9483811948
