ಕೊಪ್ಪ: ಶೃಂಗೇರಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಿಂದಾಗಿ ಕೃಷಿ ಜಮೀನುಗಳಲ್ಲಿ ಅಡಿಕೆ, ಕಾಫಿ, ಕಾಳುಮೆಣಸು, ಬೆಳೆ ಸಂಪೂರ್ಣ ನಾಶಗೊಳ್ಳುವ ಪರಿಸ್ಥಿತಿಯಿದ್ದು ರೈತರು ದಿಕ್ಕೇ ತೋಚದಂತಾಗಿದ್ದಾರೆ. ಹಾಗೆ ಅತಿವೃಷ್ಟಿಯಿಂದ ಫಸಲು ಕಳೆದುಕೊಂಡ ರೈತರು ಸಂಕಷ್ಟದಲ್ಲಿರುವ ವೇಳೆ ಶಾಸಕ ಟಿ.ಡಿ. ರಾಜೇಗೌಡರು ಈ ಬಾರಿ ಅತಿವೃಷ್ಟಿ ಆಗಿಲ್ಲ ಎಂದು ಅಧಿಕಾರಿಗಳಿಂದ ಸರ್ಕಾರಕ್ಕೆ ವರದಿ ಕೊಡಿಸುವ ಮೂಲಕ ರೈತರಿಗೆ ದ್ರೋಹ ಮಾಡಿದರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷರಾದ ದಿನೇಶ್ ಹೊಸೂರ್ ಅವರು ಕಿಡಿಕಾರಿದ್ದಾರೆ.
ಹೌದು .. ಶೃಂಗೇರಿ ಕ್ಷೇತ್ರದ ರೈತರು ಅಡಿಕೆ ಎಲೆ ಚುಕ್ಕಿ ಹಳದಿ ರೋಗಕ್ದಕೆ ಭಾಧಿತರಾಗಿದ್ದಾರೆ. ಜೊತೆಯಲ್ಲಿ ಮುಂಗಾರು ಮಳೆ ಸಹ ವಿಪರೀತವಾಗಿದ್ದು ಅಡಿಕೆ ಕಾಫಿ ಕಾಳು ಮೆಣಸು ಮುಂತಾದ ಬೆಳೆಗಳಲ್ಲಿ ಕೊಳೆರೋಗ ಕಾಣಿಸಿಕೊಂಡು ರೈತರ ಸಂಪೂರ್ಣ ಪಸಲು ಕಳೆದುಕೊಂಡಿದ್ದಾರೆ ಇದು ಶಾಸಕರ ಕಣ್ಣಿಗೆ ಬೀಳಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರ ಜೊತೆ ಈ ಹಿಂದೆ ಹಿಂದೆ ಕಾಂಗ್ರೆಸ್ ನಾಯಕರು ಅಡಿಕೆ ಎಲೆ ಚುಕ್ಕಿ ರೋಗಕ್ಕೆ 5 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದು ಈಗ ನಿಮ್ಮದೇ ಸರ್ಕಾರವಿದ್ದು ರೈತರಿಗೆ ಪರಿಹಾರ ಒದಗಿಸಿ ಕೊಡಲಿ ಎಂದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರದಿಂದ ಕಳೆದೆರಡು ವರ್ಷದಿಂದ ಮಲೆನಾಡಿನ ಅತಿವೃಷ್ಟಿ ಸಂಭವಿಸಿದ್ದು ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಶಾಸಕರ ವಿರುದ್ಧ ದಿನೇಶ್ ಹೊಸೂರ್ ಅವರು ಗರಂ ಆಗಿದ್ದಾರೆ.
ವರದಿ: ವಿಠಲ್ ಶೃಂಗೇರಿ
7676798969
