ಚಿಕ್ಕಮಗಳೂರು: ಬೇಲೂರು ಅಶ್ವಿನಿಗೆ ವಂಚನೆ ಮಾಡಿ ಎರಡನೇ ಮದುವೆ ಆಗಿದ್ದ ಶರತ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ನಿವಾಸಿ ಶರತ್ ಮೊದಲು ಇಂದಾವರ ಹುಡುಗಿಯೊಂದಿಗೆ ಮದುವೆಯಾಗಿ ವಿಚ್ಛೇದನ ಪಡೆದು ಬೇಲೂರು ಯುವತಿ ಅಶ್ವಿನಿ ಜೊತೆಗೆ ಲವ್ವಿ ಡವ್ವಿ ಶುರುಮಾಡಿ ಅವಳಿಂದ ನಾಲ್ಕು ವರೆ ಲಕ್ಷ ಹಣ ಕಿತ್ತು ಕೊಂಡು ಮದುವೆಯಾಗುವುದಾಗಿ ನಂಬಿಸಿ ನಟನೆ ಮಾಡಿ ಕಳೆದ ಹತ್ತು ವರ್ಷಗಳಿಂದ ನಟನೆ ಮಾಡಿ ಅವಳನ್ನು ಬಲಾತ್ಕಾರ ಮಾಡಿ ವಂಚನೆ ಮಾಡಿ ಕಳೆದವಾರ ಪ್ರೀತಿ ಎಂಬುವಳ ಜೊತೆಗೆ ಮದುವೆ ಆಗಿದ್ದಾನೆ.
ಮದುವೆ ಆಗುವ ಕಲ್ಯಾಣ ಮಂಟಪಕ್ಕೆ ಬಂದ ಅಶ್ವಿನಿಗೆ ಚಳ್ಳೆ ಹಣ್ಣು ತಿನ್ನಿಸಿದವ ಇಂದು ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ. ಶರತ್ ಪ್ರೀತಿ ಜೊತೆಗೆ ಮದುವೆ ಆಗುವ ಮುಂಚೆ ಸಬ್ ರಿಜಿಸ್ಟರ್ ಕಛೇರಿಯಲ್ಲಿ ನೊಂದಯಿಸಿ ಕೊಂಡು ಶಾಸ್ತ್ರಕ್ಕೆ ಮತ್ತೆ ಮದುವೆ ಆಗಿದ್ದಾನೆ.
ಛಲ ಬಿಡದ ಅಶ್ವಿನಿ ಶರತ್ ನ ಬೆನ್ನು ಬಿದ್ದು ಒಂಟಿಯಾಗಿ ಹೋರಾಟ ಮಾಡಿದ್ದರ ಫಲ ಜೈಲುಪಲಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಣ್ಣುಮಕ್ಕಳಿಗೆ ಶೋಷಣೆ ಮಾಡುವ ಶರತ್ ನಂತಹ ಹೆಣ್ಣು ಬಾಕರ ಬೆನ್ನು ಬಿದ್ದು ಹೋರಾಡಿದ ಅಶ್ವಿನಿ ಹೋರಾಟ ಮುಂದುವರೆಸಿದರೆ ಅಂತಿಮ ಜಯ ಸಿಗುತ್ತದೆ.
ಶರತ್ ಮೊದಲ ಮದುವೆ ಇಂದಾವರ ಯುವತಿ ಜೊತೆಗೆ ನಂತರ ಅಶ್ವಿನಿ ಜೊತೆಗೆ ತಿಂದು ಹೋದ ಕೊಂಡು ಹೋದವ ಪ್ರೀತಿ ಜೊತೆಯಲ್ಲಿ ಕದ್ದು ಮುಚ್ಚಿ ಮದುವೆಯಾದವನಿಗೆ ಅಶ್ವಿನಿ ಪಾಠ ಕಲಿಸಿರುವುದನ್ನು ಮೆಚ್ಚಬೇಕು.
