Thursday, May 14, 2026
Homeಜಿಲ್ಲಾಸುದ್ದಿಮೂಡಿಗೆರೆ :ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಉಪನ್ಯಾಸಕ ದಿ. ಎಂ.ಎಸ್. ಅಶೋಕ್ ರವರ 3ನೇ ಪುಣ್ಯಸ್ಮರಣೆ

ಮೂಡಿಗೆರೆ :ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಉಪನ್ಯಾಸಕ ದಿ. ಎಂ.ಎಸ್. ಅಶೋಕ್ ರವರ 3ನೇ ಪುಣ್ಯಸ್ಮರಣೆ

ಮೂಡಿಗೆರೆ : ವಿದ್ಯಾರ್ಥಿಗಳ ಆರಾಧ್ಯ ದೈವ ಅಶೋಕ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ವಿವಿಧ ಸಂಘ ಸಂಸ್ಥೆ ವತಿಯಿಂದ ಹೆಸಗಲ್ ಸರ್ಕಾರಿ ಶಾಲೆಯಲ್ಲಿ ಗೌರವ ಪೂರ್ವಕವಾಗಿ ಆಚರಿಸಲಾಯಿತು

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ ಮಾತನಾಡಿ ಅಶೋಕ್ ಅವರು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಹಲವರ ಮನಸ್ಸಿನಲ್ಲಿ ಹಾಗೂ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅನೇಕರ ಪಾಲಿಗೆ ಡಾ. ಅಶೋಕ್ ದಾರಿ ದೀಪವಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ ಮಾತನಾಡಿ ಶಿಕ್ಷಕ ವೃತ್ತಿ ಜೊತೆಗೆ ಸಂಘಟನೆ ಕಲಾಸೇವೆ, ಸಮಾಜ ಸೇವೆ ಮೂಲಕ ಜನರ ಸೇವೆ ಮಾಡಿದ್ದೂ ದಲಿತ ಸಮುದಾಯದ ಅನೇಕ ಚಳುವಳಿ ಭಾಗವಹಿಸಿ ಸಮುದಾಯದ ಉಳಿವಿಗಾಗಿ ಹೋರಾಡಿದ್ದಾರೆ ಎಂದರು

ಕನ್ನಡ ನಾಡು, ಭಾಷೆ ನುಡಿಗಾಗಿ ಇವರ ಸೇವೆ ಅಜರಾಮರ, ಇಂತಹ ಮಹಾನ್ ಚೇತನರು ಮಾಡಿ ಕೊಟ್ಟ ದಾರಿ ಹೆಮ್ಮೆ ಅನಿಸುತ್ತದೆ’’ ಎಂದಿದ್ದಾರೆ.

ಇವರ ಅಗಲಿಕೆ ನಮಗೆ ದುಃಖ ಹೆಚ್ಚಾಗುತ್ತಲೇ ಇದೆ ಆದರೆ ಇವರ ಕಾರ್ಯ ಎಂದೆಂದಿಗೂ ಜೀವಂತ ಎಂದರು

ಇವರಿಲ್ಲದ ಆ ಕ್ಷಣವನ್ನ ನೆನಪಿಸಿಕೊಳ್ಳುವುದೇ ಕಷ್ಟ. ಜೊತೆಗೆ ಕಳೆದ ಪ್ರತಿಯೊಂದು ಕ್ಷಣವೂ ಅಮೂಲ್ಯ ಘಳಿಗೆ. ಮತ್ತೆ ವಾಪಸ್ ಬರಲ್ಲ. ನೆನಪುಗಳಲ್ಲಿ ಮಾತ್ರ ಇರುತ್ತಾರೆ’’ ಎಂದಿದ್ದಾರೆ.
ಮೂರನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆ ಅಭಿಮಾನಿಗಳು ವಿದ್ಯಾರ್ಥಿಗಳು ಸಂಘಟನೆ ಪದಾಧಿಕಾರಿಗಳು ಅಶೋಕ್ ಅವರ ಬಾವಚಿತ್ರಕ್ಕೆ ಪುಷ್ಪರ್ಚನೆ ನೆರವೇರಿಸಿ ನಮನ ಸಲ್ಲಿಸಿದರು. ಇದೆ ವೇಳೆ ಇವರ ಇವರ ಜೊತೆಗೆ ಕಳೆದ ಸುಂದರ ಕ್ಷಣಗಳನ್ನ ಸ್ನೇಹಿತರು ಮೆಲುಕು ಹಾಕಿದರು

ಈ ಸಂದರ್ಭದಲ್ಲಿ ಇವರ ನೆನಪಾರ್ಥ ಛಲವಾದಿ ಮಹಾಸಭಾ ಮೂಡಿಗೆರೆ ತಾಲೂಕು ಘಟಕದಿಂದ ಹೆಸಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಎಂ ಎಸ್ ಅಶೋಕ್ ರವರ ಪುಸ್ತಕ ಪೆನ್ನು ಗಳನ್ನು ವಿತರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್, ಮುಖ್ಯ ಶಿಕ್ಷಕಿ ತಾರಾ,ಖಜಾಂಚಿ ಹೆಸಗಲ್ ಗಿರೀಶ್, ಕಾರ್ಯದರ್ಶಿ ರಾಜೇಶ್ ಬಗ್ಗಸಗೂಡು, ಗೋಣಿಬೀಡು ಹೋಬಳಿ ಅಧ್ಯಕ್ಷ ಜೇನುಬೈಲು ಕೆಂಚಯ್ಯ, ಬಣಕಲ್ ಹೋಬಳಿ ಅಧ್ಯಕ್ಷ ಬೈರಿಗದ್ದೆ ರಮೇಶ್ , ಹೆಸಗಲ್ ಗಣೇಶ್, ಶಾಲಾ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!