Thursday, March 26, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ಕೊಟ್ಟಿದ್ದೇವೆ ಅನ್ನೋದೆ ಮುಖ್ಯ: ವಲ್ಲಿ ಡಿಸೋಜ

ಕೊಟ್ಟಿಗೆಹಾರ: ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೇನು ಕೊಟ್ಟಿದ್ದೇವೆ ಅನ್ನೋದೆ ಮುಖ್ಯ: ವಲ್ಲಿ ಡಿಸೋಜ

ಕೊಟ್ಟಿಗೆಹಾರ: ದೇಶಸೇವೆ ಜೀವನದ ಅತಿ ದೊಡ್ಡ ಕರ್ತವ್ಯ. ದೇಶ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದೇ ಮುಖ್ಯ ಎಂದು ನಿವೃತ್ತ ಯೋಧ ಹಾಗೂ ಹಳೆ ವಿದ್ಯಾರ್ಥಿ ವಲೇರಿಯನ್ ಡಿಸೋಜಾ (ವಲ್ಲಿ) ಹೇಳಿದರು.


ಅವರು ಭಾನುವಾರ ನಡೆದ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ, ಬಾಲ್ಯದಲ್ಲಿ ಪಡೆದ ಶಿಕ್ಷಣ, ಶಿಕ್ಷಕರು ನೀಡಿದ ಶಿಸ್ತು ಹಾಗೂ ಮೌಲ್ಯಗಳೇ ಇಂದು ನನ್ನನ್ನು ದೇಶ ಕಾಯುವ ಯೋಧನಾಗಿ ರೂಪಿಸಿದೆ. ಮಕ್ಕಳು ಪೋಷಕರಿಗೆ ಮತ್ತು ಹಿರಿಯರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಹಾಗೂ ಮಾಜಿ ಯೋಧ ಕೆ.ಎಲ್. ವಸಂತ್ ಉದ್ಘಾಟಿಸಿ ಮಾತನಾಡಿ, ದೇಶಪ್ರೇಮ ಉಳಿಸಿಕೊಳ್ಳಲು ದೇಶಸೇವೆ ಅಗತ್ಯ. ನಾವೆಲ್ಲರೂ ಒಂದೇ ಭಾರತೀಯರು ಎಂಬ ಭಾವನೆಯಿಂದ ಸೇವೆ ಸಲ್ಲಿಸಬೇಕು. ದೇಶಸೇವೆಗೆ ಜಾತಿ–ಮತದ ಭೇದವಿಲ್ಲ ಎಂದರು. ತಾವು ವಿದ್ಯಾಭ್ಯಾಸ ಮಾಡಿದ ಕಾಲದಲ್ಲಿ ಸೌಲಭ್ಯಗಳ ಕೊರತೆ ಇದ್ದರೂ ಶಿಕ್ಷಕರ ಶ್ರಮದಿಂದ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.


ನಿವೃತ್ತ ಯೋಧ ಟಿ.ಎಸ್. ಪ್ರಸನ್ನ ಮಾತನಾಡಿ, ಚಿಕ್ಕಮ್ಮ ಟೀಚರ್ ಹಾಗೂ ಬಲರಾಮಯ್ಯ ಮಾಸ್ಟರ್ ನೀಡಿದ ಶಿಸ್ತು ಮತ್ತು ಬೋಧನೆಯೇ ನನ್ನನ್ನು ಯೋಧನಾಗಿ ರೂಪಿಸಿತು ಎಂದರು. ಯೋಧನಾಗಿ ಅನೇಕ ಏಳುಬೀಳುಗಳನ್ನು ಕಂಡಿದ್ದೇನೆ. ನಿವೃತ್ತಿಯ ನಂತರ 2018ರಲ್ಲಿ ಬೆಂಗಳೂರಿನಲ್ಲಿದ್ದ ನನ್ನ ಮನೆ ಮೇಲೆ ಉಗ್ರರ ದಾಳಿ ನಡೆದರೂ ಪತ್ನಿ ಹಾಗೂ ಮಕ್ಕಳು ಸುರಕ್ಷಿತರಾಗಿ ಪಾರಾದರು ಎಂದು ಹೇಳಿದರು.


ನಿವೃತ್ತ ಶಿಕ್ಷಕ ಬಲರಾಮಯ್ಯ ಮಾತನಾಡಿ, ಶಾಲಾ ಕಟ್ಟಡ ಹಳೆಯದಾಗಿದ್ದು ಅದರ ಅಭಿವೃದ್ಧಿಗೆ ನೆರವು ನೀಡಲು ಸಿದ್ಧನಿದ್ದೇನೆ ಎಂದರು. ಐದು ದಶಕಗಳ ಬಳಿಕವೂ ಹಳೆ ವಿದ್ಯಾರ್ಥಿಗಳು ಗೌರವಿಸಿರುವುದು ನನಗೆ ಅಪಾರ ಸಂತಸ ತಂದಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ವಲೇರಿಯನ್ ಡಿಸೋಜಾ (ವಲ್ಲಿ), ಕೆ.ಎಲ್. ವಸಂತ್, ಎ. ಜಯರಾಮಗೌಡ, ಜಯಂತ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಸಿ. ರಮೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಅಮೃತ ಮಹೋತ್ಸವದ ಕಾರ್ಯದರ್ಶಿ ಟಿ.ಎಂ. ನರೇಂದ್ರ, ಟಿ.ಎ. ಖಾದರ್, ಸುಬ್ಬಯ್ಯ ಮಾತನಾಡಿದರು. ಟಿ.ಸಿ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಕುರಿತು ಮುಖ್ಯ ಶಿಕ್ಷಕಿ ಕೆ. ಕವಿತಾ ಹಾಗೂ ಹಂಸಲೇಖ ವರದಿ ಮಂಡಿಸಿದರು.


ಈ ಸಂದರ್ಭದಲ್ಲಿ ಹಳೆಯ ಶಿಕ್ಷಕರಾದ ಲಿಲ್ಲಿ ವಿ.ಡಿ., ಚಿಕ್ಕಮ್ಮ, ಸುಲೋಚನಾ, ಸರೋಜ, ಬಲರಾಮಯ್ಯ, ನರಸಿಂಹಮೂರ್ತಿ, ಭರತ್ ರೆಡ್ಡಿ ಹಾಗೂ ಈ ಶಾಲೆಯಲ್ಲಿ ಕಲಿತು 75 ವರ್ಷ ಪೂರೈಸಿದ ಹಳೆಯ ವಿದ್ಯಾರ್ಥಿಗಳಾದ ಟಿ.ಎಂ. ಗೋಪಾಲಗೌಡ, ರವಿಕಲಾ ಪೈ, ಲಕ್ಷ್ಮಣಾಚಾರ್, ಟಿ.ಎ. ಖಾದರ್, ಕೃಷ್ಣಾಚಾರ್, ಎ.ಬಿ. ಕೃಷ್ಣೇಗೌಡ ಅವರನ್ನು ಅಮೃತ ಮಹೋತ್ಸವ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಿ.ಎಂ. ಸತೀಶ್, ಪ್ರಧಾನ ಸಂಚಾಲಕ ಬಿ.ಎಂ. ಭರತ್, ಟಿ.ಎಂ. ಗಜೇಂದ್ರ, ಕಾರ್ಯದರ್ಶಿ ಹಸೇನ್ ಹಾಜಿ, ಟಿ.ಎಸ್. ಮಂಜುನಾಥ್, ನಟೇಶ್, ಲೋಲಾಕ್ಷಿ, ದೇವಣ್ಣ ಚಕ್ಕೋಡು, ಟಿ.ಜಿ. ಪ್ರಶಾಂತ್, ಕಿರಣ್ ಎ.ಎನ್., ಪೂರ್ಣೇಶ್, ಗ್ರಾ.ಪಂ. ಅಧ್ಯಕ್ಷ ಎ.ಎನ್. ರಘು, ಸ್ವರೂಪ, ಸುಶೀಲ, ಸಂಜಯ್ ಗೌಡ, ಎ.ಕೆ. ಸಂತೋಷ್, ಅಭಿಲಾಷ್ ಎ.ಆರ್., ಅಶ್ವಥ್ ಎ.ಆರ್., ಅನ್ವಿತ್ ಕುಮಾರ್, ಶಿಕ್ಷಕಿ ಶೈನಿ ತಂಬಿ, ಕಿರಣ್ ಕುಮಾರ್, ಟಿ.ಎಂ. ಹರಿಣಿ, ಬಸವಲಿಂಗಪ್ಪ, ಮೋಹನ್ ಮಲಯಮಾರುತ, ನಂದೀಶ್ ಬಂಕೇನಹಳ್ಳಿ, ತನು ಕೊಟ್ಟಿಗೆಹಾರ, ವೇಣುಗೋಪಾಲ ಪೈ, ಉದಯ ಆರ್,ನರಸಿಂಹ, ಹರೀಶ್ ಭಟ್, ರಹಮಾನ್, ಸುನೀಲ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!