Friday, March 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯದ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಡಬೇಡಿ: ಸಿ.ಟಿ.ರವಿ!

ಚಿಕ್ಕಮಗಳೂರು: ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯದ ಸ್ವಾರ್ಥಕ್ಕೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಡಬೇಡಿ: ಸಿ.ಟಿ.ರವಿ!

ಚಿಕ್ಕಮಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯದ ಸ್ವಾರ್ಥ – ತೆವಲಿಗೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಟ್ಟು ಸಾಯಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅವರು, ಕರ್ನಾಟಕದಲ್ಲಿ ಕೇರಳ ದರ್ಬಾರ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕರ್ನಾಟಕ-ಕನ್ನಡಿಗರ ಹಿತಾಸಕ್ತಿ-ಸ್ವಾಭಿಮಾನವನ್ನ ಒತ್ತೆ ಇಡಬೇಡಿ ಎಂದು ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲೋಯ್ತು ನಿಮ್ಮ ಸ್ವಾಭಿಮಾನ. ಸಿಎಂ-ಡಿಸಿಎಂ ಅವರೇ ಕೊಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. ಹಾಗಾದ್ರೆ, ಈಗೇಕೆ ಅಕ್ರಮವನ್ನ ಸಮರ್ಥಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯದ ಅನಿವಾರ್ಯತೆಯಲ್ಲಿ ಕೇರಳದ ಅಕ್ರಮವನ್ನ ಸಮರ್ಥಿಸುವ ಅನಿವಾರ್ಯತೆ ನಿಮಗೆ ಇರಬಹುದು. ಆದರೆ, ಕನ್ನಡಿಗರಿಗಿಲ್ಲ. ಕರ್ನಾಟಕಕ್ಕೂ ಇಲ್ಲ. ಅಕ್ರಮ ಎಂದ ಮೇಲೆ ಸಮರ್ಥಿಸುವ ಅವಶ್ಯಕತೆ ಇಲ್ಲ. ಮೊದಲ ದಿನ ತೋರಿಸಿದ ವಿಶ್ವಾಸದ ಮಾತು ಈಗ್ಯಾಕೆ ಮಂಕಾಯ್ತು. ಅಕ್ರಮ ಅಕ್ರಮವೇ, ಅಕ್ರಮವನ್ನ ಬೆಂಬಲಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!