Wednesday, March 25, 2026
Homeಕ್ರೈಮ್ಮೂಡಿಗೆರೆ: ಚಾರ್ಮಾಡಿ ಘಾಟ್‌ ನಲ್ಲಿ ಎಚ್ಚರಿಕೆಯ ಫಲಕವಿದ್ರೂ ಪ್ರವಾಸಿಗರ ಹುಚ್ಚಾಟ: ಸ್ಥಳೀಯರ ಆಕ್ರೋಶ!

ಮೂಡಿಗೆರೆ: ಚಾರ್ಮಾಡಿ ಘಾಟ್‌ ನಲ್ಲಿ ಎಚ್ಚರಿಕೆಯ ಫಲಕವಿದ್ರೂ ಪ್ರವಾಸಿಗರ ಹುಚ್ಚಾಟ: ಸ್ಥಳೀಯರ ಆಕ್ರೋಶ!

ಚಿಕ್ಕಮಗಳೂರು: ಪೋಲಿಸ್ ಇಲಾಖೆಯ ಎಚ್ಚರಿಕೆಯ ಫಲಕದ ಸಮೀಪದಲ್ಲೇ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತಗಳ ಜಾರುವ ಬಂಡೆ ಮೇಲೆ ಫೋಟೋ ಶೂಟ್,ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಡ್ಯಾನ್ಸ್‌ಮಾಡುವ ವೀಡಿಯೋ ಮಾಡಿಕೊಳ್ಳುವುದೂ ಸೇರಿದಂತೆ ನಿರ್ಭೀತಿಯಿಂದ ಪ್ರವಾಸಿಗರು ಹುಚ್ಚಾಟ ನಡೆಸುತ್ತಿರುವುದು ಮುಂದುವರೆದಿದೆ.

ಫೋಟೋ ಶೂಟ್ ಮಾಡಬೇಡಿ, ಬಂಡೆ ಹತ್ತಬೇಡಿ ಎಂಬ ನಾಮಫಲಕಹಾಕಿರುವ ಜಾಗದಲ್ಲೇ ಬಂಡೆ ಏರುತ್ತಿದ್ದಾರೆ.ಚಾರ್ಮಾಡಿ ಘಾಟಿಯಲ್ಲಿ ಬಣಕಲ್ ಪೊಲೀಸರು ಬೀಟ್ ಇರುತ್ತಾರೆ. ಇಡೀ ದಿನ ಓಡಾಡುತ್ತಿರು ತ್ತಾರೆ. ಆದರೆ, ಕೆಲ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ಈ ರೀತಿ ಹುಚ್ಚಾಟ ಮೆರೆಯುತ್ತಿದ್ದಾರೆ.

ವರ್ಷ ಪೂರ್ತಿ ಸುರಿದ ನಿರಂತರ ಮಳೆಯಿಂದ ಚಾರ್ಮಾಡಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸುಂದರ ತಾಣ. 22 ಕಿ.ಮೀ. ವ್ಯಾಪ್ತಿಯ ರಸ್ತೆ ತಿರುವುದಗಳಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪಾತಾಳ, ಮತ್ತೊಂದೆ ಡೆ ಮುಗಿಲೆತ್ತರದ ಬೆಟ್ಟಗುಡ್ಡಗಳು. ಇಂತಹ ಸುಂದರ ಹಾಗೂ ಅಪಾಯದ ತಾಣದಲ್ಲಿ ಪ್ರವಾಸಿಗರು ಹೇಳೋರು-ಕೇಳೋರಿಲ್ಲದೆ ಹುಚ್ಚಾಟ ಮೆರೆಯುತ್ತಿದ್ದಾರೆ.

ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಪ್ರವಾಸಿಗರು ಹತ್ತಾರು ಅಡಿ ಎತ್ತರ ಕಲ್ಲುಬಂಡೆಗಳ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುವ ಕ್ರೇಜಿಗೆ ಮುಂದಾಗಿದ್ದಾರೆ. ಈ ಕಲ್ಲುಬಂಡೆ ಹಾಗೂ ಗುಡ್ಡಗಳನ್ನು ಏರಿ ಇಳಿಯುವಾಗ ಒಂಚೂರು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಈಗಾಗಲೇ ಇಂತಹ ಅಪಾಯಕಾರಿ ಜಾಗದಿಂದ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡು ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವವರು ಇದ್ದಾರೆ. ಆದರೆ, ಇಂತಹಾ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರ ಮೋಜಿನ ಬೇಜವಾಬ್ದಾರಿ ವರ್ತನೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಹುಚ್ಚಾಟಮೆರೆಯುವ ಪ್ರವಾಸಿಗರ ವಾಹನಗಳನ್ನು ಸೀಜ್ ಮಾಡಬೇಕು. ಕೇಸ್ ದಾಖಲಿಸಬೇಕು. ಗದರಿಸಿ ಕಳಿಸಿದರೆ ಮತ್ತೆ ಅದೇ ಕೆಲಸ ಮಾಡುತ್ತಾರೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!