ಚಿಕ್ಕಮಗಳೂರು : ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿತೇಂದ್ರ ಕುಮಾರ್ ದಯಾಮ ನೇಮಕಗೊಂಡಿದ್ದಾರೆ.

ಪ್ರಸ್ತುತ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಕ್ರಂ ಅಮಟೆ ಅವರನ್ನ ಬೆಂಗಳೂರು ಪೂರ್ವ ವಿಭಾಗಕ್ಕೆ ಡಿಸಿಪಿ ಹುದ್ದೆಗೆ ನಿಯೋಜಿಸಲಾಗಿದೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ 2018 ರ ಬ್ಯಾಚಿನ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಅವರನ್ನು ನೇಮಿಸಲಾಗಿದೆ. ಹಾಗೆ ಅವರು ನಕ್ಸಲ್ ವಿರೋಧಿ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು
ಸದ್ಯ ಧರ್ಮಸ್ಥಳ ಎಸ್ ಐಟಿ ಪ್ರಕರಣದಲ್ಲಿ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.
