ಮಣಿಪಾಲ: ಜಿಲ್ಲೆಯಾದ್ಯಂತ ಹೊಸ ವರ್ಷ-2026ನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಹೊಸ ವರ್ಷದ ಮೊದಲ ಕ್ಷಣ ಎದುರಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್‌ಗಳನ್ನು ಕತ್ತರಿಸಿ, ಶುಭಾಶಯಗಳನ್ನು ಕೋರಲಾಯಿತು.
ಹಲವರು ಪಬ್, ಬಾರ್, ಫಾರ್ಮ್ ಹೌಸ್, ಸಮುದಾಯ ಭವನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಉಳಿದವರು ಕುಟುಂಬದ ಜತೆ ಸಂಭ್ರಮದಲ್ಲಿ ಭಾಗಿಯಾದರು.

ವಿದ್ಯಾಕಾಶಿ ಮಣಿಪಾಲದಲ್ಲಿ ಮದ್ಯಪಾನ, ಅಮಲು ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು 24 ಚೆಕ್ ಪೋಸ್ಟ್ ಗಳನ್ನು ತೆರೆದಿದ್ದರು. ಮದ್ಯಪಾನ ಮಾಡಿ ಗಾಡಿ ಚಲಾಯಿಸುವವರನ್ನು ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಡ್ರಿಂಕ್ ಅಂಡ್ ಡ್ರೈವ್ ಮಾಡಿದ ಯುವಕರಿಗೆ ಪೊಲೀಸರು ಫೈನ್ ಸಹಿತ ಬಿಸಿ ಮುಟ್ಟಿಸಿದರು.ಬಾರ್ ಮತ್ತು ಪಬ್ ಹೊರಗೆ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು ಕಠಿಣ ನಿಯಮಗಳನ್ನು ಕೈಗೊಂಡರು.12 ಗಂಟೆ ಆಗುತ್ತಿದ್ದಂತೆ ಬಾರ್ ಪಬ್ ಗಳನ್ನು ಮುಚ್ಚಿಸಲಾಯಿತು.
