Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಟೀ ವಿಚಾರಕ್ಕೆ ಹೋಟೆಲ್‌ʼನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ!

ಚಿಕ್ಕಮಗಳೂರು: ಟೀ ವಿಚಾರಕ್ಕೆ ಹೋಟೆಲ್‌ʼನಲ್ಲಿ ಗಲಾಟೆ: ಸಿಬ್ಬಂದಿ ಮೇಲೆ ಹಲ್ಲೆ!

Telegram Group
Join Now

ಚಿಕ್ಕಮಗಳೂರು: ಹೋಟೆಲ್‌ ನಲ್ಲಿ ಟೀ ವಿಚಾರಕ್ಕೆ ಗಲಾಟೆ ನಡೆದಿದ್ದು ಹೋಟೆಲ್‌ ಸಿಬ್ಬಂದಿಯೇ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಬಸ್‌ ನಿಲ್ದಾಣದ ಬಳಿ ಇರುವ ವಿನಾಯಕ ಹೋಟೆಲ್‌ ನಲ್ಲಿ ನಡೆದಿದೆ.

ಹೌದು .. ಹೊಸ ವರ್ಷದ ಆಚರಣೆಗೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಟೀ ಅಂಗಡಿಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ.

ಮುಂಜಾನೆ ಸಮಯದಲ್ಲಿ ಕೋರಮಂಗಲದ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಪುನೀತ್ ಹಾಗೂ ಅವರ ಸ್ನೇಹಿತರು ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಗೆ ತೆರಳಿದ್ದರು. ಟೀ ನೀಡಲು ವಿಳಂಬವಾದ ಕಾರಣ ಕೋಪಗೊಂಡ ಪುನೀತ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿದ ವ್ಯಕ್ತಿ ಶಿವಮೊಗ್ಗ ಮೂಲದ ಪೊಲೀಸ್‌ ಕಾನ್‌ಸ್ಟೇಬಲ್ ಎಂದು ಹೇಳಿಕೊಂಡಿರುತ್ತಾನೆ.ಅಲ್ಲದೆ ಟೀ ಅಂಗಡಿಯಲ್ಲಿ ದಾಂಧಲೆ ನಡೆಸಿ ಧ್ವಂಸ ಮಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಘಟನಾ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಕಾನ್‌ಸ್ಟೇಬಲ್ ಪುನೀತ್‌ನ್ನು ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments