Saturday, September 26, 2026
Homeಕ್ರೈಮ್ಉಡುಪಿ: ಏಕಾಏಕಿ ರಿವರ್ಸ್ ಹೋಗಿ ರಾದ್ಧಾಂತ ಸೃಷ್ಟಿಸಿದ ಕಾರು : ಹಲವು ವಾಹನಗಳಿಗೆ ಡಿಕ್ಕಿ! Viral...

ಉಡುಪಿ: ಏಕಾಏಕಿ ರಿವರ್ಸ್ ಹೋಗಿ ರಾದ್ಧಾಂತ ಸೃಷ್ಟಿಸಿದ ಕಾರು : ಹಲವು ವಾಹನಗಳಿಗೆ ಡಿಕ್ಕಿ! Viral Video

Telegram Group
Join Now

ಉಡುಪಿ: ನಗರದ ಜಾಮಿಯ ಮಸೀದಿ ಬಳಿ ಕಾರೊಂದು ಏಕಾಏಕಿ ರಿವರ್ಸ್ ಹೋಗಿ ರಾದ್ಧಾಂತ ಸೃಷ್ಟಿಸಿದ ಘಟನೆ ನಡೆದಿದೆ.

ಕಟ್ಟಡವೊದರ ಮುಂಭಾಗದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕಾರ್ ಮಾಲಿಕ ಹೊರಡುವ ಸಿದ್ಧತೆ ಮಾಡಿ ಕಾರಿನೊಳಗೆ ಕುಳಿತುಕೊಂಡಿದ್ದಾರೆ. ಆಟೋಮೆಟಿಕ್ ಕಾರು ಇದಾಗಿದ್ದು, ಏಕಾಏಕಿ ಎಕ್ಸಲೇಟರ್ ಕೊಟ್ಟಿದ್ದರಿಂದ ಕಾರು ನಿಯಂತ್ರಣ ತಪ್ಪಿ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಆಟೋ ರಿಕ್ಷಾ ಮತ್ತು ಪಾದಾಚಾರಿಗೆ ಗುದ್ದಿದೆ.

ಗಾಯಕ್ಕೊಳಗಾದ ದ್ವಿಚಕ್ರ ವಾಹನ ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಟೋ ಚಾಲಕ ಮತ್ತು ಪಾದ ಚಾರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!