ಕೊಟ್ಟಿಗೆಹಾರ: ಸ್ನೇಹ ಅಂದ್ರೆ ಹಾಗೇನೇ ಜಾತಿ ಧರ್ಮ ಹಣ ಆಸ್ತಿ ಅಂತಸ್ತು ಎಲ್ಲವನ್ನು ಮೀರಿದ್ದು. ಇಂತಹ ಸ್ನೇಹ ಎರಡು ದಶಕ ಗಳ ನಂತರ ಒಂದಾದ್ರು ಅಂದ್ರೆ ಕೇಳೋಕೆ ಏನೋ ಒಂತರ ಕಿವಿಗೆ ಇಂಪು. ಹೌದು.. ಇಂತಹ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಣಕಲ್ ಪ್ರೌಢ ಶಾಲೆ.

ಹಳೇ ನೆನಪುಗಳು ಮತ್ತೆ ಮೆಲುಕು ಹಾಕಿದ ಹಳೇ ವಿದ್ಯಾರ್ಥಿ ಬಳಗ.. ಒಂದು ಕಡೆ ಆದ್ರೆ. ಇನ್ನೊಂದೆಡೆ ಪಾಠ ಕಲಿಸಿ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಗುರುಗಳನ್ನು ನೋಡಿ ಕಣ್ಣುತುಂಬಿಕೊಂಡ ಅವಿಸ್ಮರಣೀಯ ಕ್ಷಣ ಇನ್ನೊಂದೆಡೆ. ಗುರುವಿಗೆ ತಲೆ ಬಾಗಿ ಗೌರವದಿ ನಮಸ್ಕರಿಸಿ ಆಶೀರ್ವಾದ ಪಡೆದ ನಾವೇ ಧನ್ಯೋಸ್ಮಿ ಅದ ಹಳೇ ವಿದ್ಯಾರ್ಥಿ ಗಳು.

ವಾವ್ ಮತ್ತೆ ಶುರು ಆಯ್ತು ಬಾಲ್ಯ ಪ್ರಾರ್ಥನೆ, ಹಾಜರಾತಿ,ಪಾಠ, ಮತ್ತೆ ಮರುಕಳಿಸಿದ ಶಾಲಾ ದಿನಗಳು: ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸ್ನೇಹಸಮ್ಮೀಲನ. ಇಪ್ಪತ್ತು ವರ್ಷದ ಹಿಂದೆ ಬಣಕಲ್ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯ ಕೊಠಡಿಯಲ್ಲಿ ಕುಳಿತು ಮತ್ತೆ ತಮ್ಮ ನೆಚ್ಚಿನ ಶಿಕ್ಷಕರ ಪಾಠ ಕೇಳೋ ಸೌಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ ಅಂದ್ರು ಅಲ್ಲಿನ ಟೀಮ್ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು.
ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ತೆಗೆದು ಭವಾನಿ, ಹರೀಶ, ಕೇಶವ, ಪುನೀತ, ಅಂತಾ ಹಾಜರಿ ತೆಗೆದುಕೊಂಡು ರೋಲ್ ದೊಣ್ಣೆ ಆಡ್ಸುತ್ತ ಮತ್ತೆ ಕೈ ಮೇಲೆ ಎರೆಡೇಟು ಹಾಕಿ ವಿದ್ಯಾರ್ಥಿಗಳಿಗೆ ಅಲ್ಲಾ ಅಲ್ಲ ಹಳೇ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು ಗಣಿತ ಟೀಚರ್.
ಅಯ್ಯೋ ನನ್ನ ಆದ್ರೂ ಪ್ರಶ್ನೆ ಕೇಳಿದ್ರೆ ಕಷ್ಟ ಅಂತ ತಲೆ ತಗ್ಗಿಸಿ ಕೂತ್ರೆ ಬಿಡ್ತಾರಾ ಮೇಷ್ಟ್ರು ಹೇಯ್ ಎದ್ದೇಳೇ ಲಾವಣ್ಯ ಅಂದೆ ಬಿಟ್ರು ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆದುಕೊಂಡರು. ಎರಡು ದಶಕದ ಹಿಂದಿನ ಶಾಲೆಯ ನೆನಪನ್ನು ಮತ್ತೆ ಮೆಲುಕು ಹಾಕಿ, ಪ್ರಾರ್ಥನೆಗೆ ಸಾಲಾಗಿ ನಿಂತು ನಾಡಗೀತೆಗೆ ಧ್ವನಿ
ಹಾಡಿ ಭಾರತ್ ಮಾತೆಯ ಮೇರಗನ್ನು ಹೆಚ್ಚಿಸಿದರು.

ಒಟ್ಟಿನಲ್ಲಿ ಬಣಕಲ್ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಮತ್ತು ಗುರು ವಂದನಾ ಕಾರ್ಯಕ್ರಮ ಇಂತಹ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿ ವಿವಿಧ ಶಾಲೆಗಳಲ್ಲೂ ಇಂತಹ ಕಾರ್ಯಕ್ರಮ ನೆರವೇರಿಸಲು ಮಾದರಿಯಾದರು
ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನೆನಪನ್ನು ಮೆಲುಕು ಹಾಕಿದರ ಜೊತೆಗೆ ಸ್ನೇಹಕ್ಕೆ ಎಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ ಎಂಬುದನ್ನು ಸಾಬೀತು ಪಡಿಸಿದರು.
ಇದೆ ಸಂದರ್ಭದಲ್ಲಿ ಶಿಕ್ಷಕರಾದ ಎನ್ ಚಂದ್ರಶೇಖರ್, ಪಿ ವಾಸುದೇವ್, ಜಿ.ಎಚ್ ಶ್ರೀನಿವಾಸ್, ವಲ್ಸಮ್ಮ, ಕವಿತಾ, ಸಿ ಬೋರಕ್ಕ, ಡಿ.ಎನ್ ಪ್ರವೀಣ್, ಉಮಾ ಮಹೇಶ್ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯೊಂದಿಗೆ
ಗೌರವಿಸಲಾಯಿತು.
ವಿವಿದೆಡೆ ಯಿಂದ ಬಂದ ವಿದ್ಯಾರ್ಥಿಗಳು ಇಪ್ಪತ್ತು ವರ್ಷಗಳ ನಂತರ ಸಿಕ್ಕ ತಮ್ಮ ಸಹಪಾಠಿಗಳನ್ನು ಕಂಡು ಕುಶಲೋಪರಿ ವಿಚಾರಿಸಿ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಬದುಕಿನ ಬ್ಯುಸಿ ಯಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಅಮೂಲ್ಯ ದಿನಗಳನ್ನು ನೆನೆದು ಕಣ್ಣಂಚಿನಲ್ಲಿ ಸಂತಸದ ಕಣ್ಣೀರು ಇಡುತ್ತ ಶಾಲೆಯಲ್ಲಿ ಮತ್ತೆ ಸೇರಿ ಸಂತೋಷಪಟ್ಟರು.
ತಮ್ಮ ಕೆಲಸದ ಒತ್ತಡದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದೆ ಇದ್ದ ಹಳೇ ವಿದ್ಯಾರ್ಥಿ ಗಳು ದೇಶ ವಿದೇಶದಲ್ಲಿ ನೌಕರಿಯಲ್ಲಿರುವರು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಆನಂದ ಪಟ್ಟರು. ಹಾಗೆಯೇ ಶಾಲೆಯ ಆವರಣದ ಸುತ್ತ ಮುತ್ತ ತೆಂಗು ಹಾಗೂ ವಿವಿಧ ಸಸಿಗಳನ್ನು ನೆಡುವುದರ ಮುಖೇನ ಪರಿಸರ ಸಂರಕ್ಷಣೆಗೆ ಕರೆ ನೀಡಿದರು
ಇದೆ ವೇಳೆ ಶಾಲೆಗೆ ಹಳೇ ವಿದ್ಯಾರ್ಥಿ ಬಳಗದ ವತಿಯಿಂದ ವಾಟರ್ ಡಿಸ್ಪೆನ್ಸ್ರರ್ ಕೊಡುಗೆಯಾಗಿ ನೀಡಲಾಯಿತು.
ಈ ಸುಂದರ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್. ದಿವಾಕರ್, ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಿರ್ದೇಶಕರಾದ ಜಕವುಲ್ಲಾ, ಬಿ.ಎಸ್.ವಿಕ್ರಂ ಹಾಗೂ ವಿದ್ಯಾರ್ಥಿಗಳು, ಪೋಷಕರು, ಹಳೇ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.
