Sunday, March 29, 2026
Homeಕ್ರೈಮ್ಚಿಕ್ಕಮಗಳೂರು: ಹುಲಿ ಗಣತಿ ಹಿನ್ನೆಲೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ತಾತ್ಕಾಲಿಕ ಚಾರಣ ನಿರ್ಬಂಧ

ಚಿಕ್ಕಮಗಳೂರು: ಹುಲಿ ಗಣತಿ ಹಿನ್ನೆಲೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ತಾತ್ಕಾಲಿಕ ಚಾರಣ ನಿರ್ಬಂಧ

ಚಿಕ್ಕಮಗಳೂರು : ಅಖಿಲ ಭಾರತ ಹುಲಿ ಗಣತಿ 2026ರ ಪ್ರಕ್ರಿಯೆಯು ಸೋಮವಾರದಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಚಾರಣ ಪಥಗಳು ಮತ್ತು ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಜ.5, 2026ರಿಂದ ಜ.12, 2026ರವರೆಗೆ ಒಟ್ಟು 8 ದಿನಗಳ ಕಾಲ ಹುಲಿ ಗಣತಿ ನಡೆಯಲಿದ್ದು, ಗಣತಿ ನಡೆಯುವ ಈ ದಿನಗಳಂದು ಚಾರಣ ಸ್ಥಳಗಳಲ್ಲಿ ಈ ನಿರ್ಬಂಧ ಜಾರಿಯಲ್ಲಿರುತ್ತದೆ.

ಹುಲಿ ಗಣತಿ ಕಾರ್ಯವು ಸುಗಮವಾಗಿ ನಡೆಯಲು ಅರಣ್ಯ ಇಲಾಖೆಯು ಕುದುರೆಮುಖ, ಗಂಗಡಿಕಲ್, ಕುರಿಂಜಾಲ್, ವಾಲಿಕುಂಜ ಕೆರೆಕಟ್ಟೆ, ನೇತ್ರಾವತಿ, ಕೊಡಚಾದ್ರಿ ಮಾಲೂರು, ಕೊಡಚಾದ್ರಿ ಹಿಡ್ಲುಮನೆ ಜಲಪಾತ, ನರಸಿಂಹ ಪರ್ವತ ಮಲ್ಲಂದೂರು, ನರಸಿಂಹ ಪರ್ವತ ಕಿಗ್ಗ ವಾಲಿಕುಂಜ ಕಾರ್ಕಳ, ಬಂಡಾಜೆ ಓಲಂಬ್ರ ಚಾರಣ ತಾಣಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

ಕೇವಲ ಚಾರಣ ಪಥಗಳಲ್ಲದೆ, ಈ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಲಪಾತಗಳಿಗೂ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಗಣತಿ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಮತ್ತು ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಈ ದಿನಾಂಕಗಳಂದು ತಮ್ಮ ಪ್ರವಾಸವನ್ನು ಯೋಜಿಸದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಚಾರಣ ಪಥಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಇಲಾಖೆ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!