Sunday, September 27, 2026
Homeಜಿಲ್ಲಾಸುದ್ದಿಮೂಡಿಗೆರೆ : ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಬೆಟ್ಟಗೆರೆ ಗ್ರಾಮದ ನಿತಿನ್ ಕುಟ್ಟಿ ನೇಮಕ

ಮೂಡಿಗೆರೆ : ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಬೆಟ್ಟಗೆರೆ ಗ್ರಾಮದ ನಿತಿನ್ ಕುಟ್ಟಿ ನೇಮಕ

Telegram Group
Join Now

ಮೂಡಿಗೆರೆ: ರಾಷ್ಟ್ರೀಯ ಕಬ್ಬಡಿ ಪಂದ್ಯಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ B.C.ಸುರೇಶ್ ಅಕಾಡಮಿ ಬೆಟ್ಟಗೆರೆ ಕ್ಲಬ್‌ ನ ನಿತೀನ್ ಕುಟ್ಟಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಸೀನಿಯರ್ ಸರ್ಕಲ್ ರಾಜ್ಯ ತಂಡಕ್ಕೆ ಮೂಡಿಗೆರೆ ತಾಲೂಕು ಬೆಟ್ಟಗೆರೆ ಗ್ರಾಮದ ನಿತೀನ್ ಕುಟ್ಟಿ ಆಯ್ಕೆ ಯಾಗಿದ್ದಾರೆ ಬೆಂಗಳೂರಿನ ಕಂಠೀರವ ಒಳಂಗಣ ಕ್ರೀಡಾಂಗದಲ್ಲಿ ಜನವರಿ 6ರಂದು ಆಯ್ಕೆ ಪ್ರಕ್ರಿಯೆ ಜರಗಿತು.

ಉತ್ತರಾಖಂಡದಲ್ಲಿ ಜನವರಿ 10, 11 ಮತ್ತು 12ರಂದು ನಡೆಯುವ ಸೀನಿಯರ್ ಸರ್ಕಲ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಂಡವನ್ನು ಪ್ರತಿನಿಧಿಸುತ್ತಿದ್ದೂ ನಿತಿನ್ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಅಕಾಡೆಮಿ ಅಧ್ಯಕ್ಷರಾದ ಬಿಸಿ ಸುರೇಶ್ ಮತ್ತು ಕಾರ್ಯದರ್ಶಿಗಳು ಹಾಗೂ ತರಬೇತುದಾರರು ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ಆಟಗಾರರು ಶುಭಹಾರೈಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!