ಚಿಕ್ಕಮಗಳೂರು: ನಗರದ ಖಾಸಗಿ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದ್ದು ಅವಧಿ ಮೀರಿದ ಔಷಧಿ ಮಾರಾಟ ಮಾಡುತ್ತಿರುವ ಆಸ್ಪತ್ರೆ ಸಿಬ್ಬಂದಿ.
ಹೌದು.. ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆ ಆಶ್ರಯ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಮಾರುತ್ತಿದ್ದು ಇದರಿಂದ ಮುಂದೇನಾದರೂ ಅವಘಡಗಳು ಸಂಭವಿಸಿದರೆ ನಾವು ಜವಾಬ್ದಾರರಲ್ಲವೆಂದೆ ಹೇಳುತ್ತಿದ್ದು ಇದಕ್ಕೆ ನೇರ ಹೊಣೆ ಯಾರು ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಪುಟ್ಟ ಮಗುವಿಗೆ ಜ್ವರವಿದೆ ಎಂದು ಹೋದಾಗ ಯಡವಟ್ಟು ಎದ್ದು ಕಂಡು ಬಂದಿದ್ದು 2 ವರ್ಷ 7 ತಿಂಗಳ ಮಗುವಿಗೆ ಔಷಧಿ ಕೊಟ್ಟ ಸಿಬ್ಬಂದಿ ಮಗಳಿಗೆ ಈ ಸಿರಪ್ ಕುಡಿಸಿ, ಏನಾದ್ರೂ ಆದ್ರೆ ನೀವೇ ಜವಾಬ್ದಾರಿ ಎಂದು ಬೇಜವಾಬ್ದಾರಿ ಹೇಳಿ ನೀಡಿದ ಆಸ್ಪತ್ರೆ ಸಿಬ್ಬಂದಿ
ಆದರೆ ಮೆಡಿಸನ್ ಕೊಡುವ ಮೊದಲು ದುಡ್ಡಿಗೆ ಪ್ರಾಮುಖ್ಯತೆ ಕೊಡುತ್ತಾರೆ ವಿನಾ ಆ ಔಷಧಿ ಬಗ್ಗೆ ಏನೂ ಸರಿಯಾದ ಮಾಹಿತಿ ಕೊಡಲ್ಲ ಎಂದು ಆಶ್ರಯ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನರ ಜೀವದ ಜೊತೆ ಯಾಕೆ ಚೆಲ್ಲಾಟ ಆಡುತ್ತೀರಿ ಹಾಗೆ ಅವಧಿ ಮೀರಿದ ಔಷಧಿಗಳಿಂದ ಮುಂದೇನಾದರೂ ಅವಘಡಗಳು ಸಂಭವಿಸಿದರೆ ಇದಕ್ಕೆ ನೇರ ಹೊಣೆ ಯಾರು ಎಂದು ಗರಂ ಆದರು.
