ಕೊಟ್ಟಿಗೆಹಾರ: ವಿದ್ಯಾರ್ಥಿನಿ ಕುಮಾರಿ ಸಿರಿ ಕಳೆದ ವರ್ಷ ಚಾರ್ಮಾಡಿ ಘಾಟಿಯಲ್ಲಿ ಆಟೋ ಅಪಘಾತವಾಗಿ ಕೋಮಾ ಸ್ಥಿತಿಗೆ ಹೋಗಿದ್ದರು. ಈಗ ತುಸು ಚೇತರಿಕೆಯಾಗಿ ನಡೆಯಲಾಗದೇ ಹಾಸಿಗೆ ಹಿಡಿದಿದ್ದಾರೆ.ಅವರು ಯಥಾಸ್ಥಿತಿಗೆ ಬರಲು ಆಸ್ಪತ್ರೆಗೆ ರೂ15 ಲಕ್ಷ ಖರ್ಚು ಬೇಕಿದೆ ಎಂದು ಬಣಕಲ್ ಯುವಕರ ತಂಡದ ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮದಲ್ಲಿ ಟಿವಿ ಮುಖೇನ ಅವರ ಸ್ಥಿತಿ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಿ ನೆರವು ಕೋರಲಾಗಿತ್ತು.
ಬಣಕಲ್ ನಿವಾಸಿ ಮೈಸೂರು ಉದ್ಯಮಿ ದಿನೇಶ್ ಶೆಟ್ಟಿ ಕೊಟ್ಟಿಗೆಹಾರ ಸಿರಿ ಅವರ ಮನೆಗೆ ತೆರಳಿ ರೂ1ಲಕ್ಷ ಚೆಕ್ ಅನ್ನು ಸಿರಿಗೆ ನೀಡುವ ಮೂಲಕ ನೆರವಾದರು.ಬಳಿಕ ಮಾತನಾಡಿದ ಅವರು ಸಿರಿ ಉದಯೋನ್ಮುಖ ಉತ್ತಮ ಪ್ರಥಮ ವರ್ಷದ ಇಂಜೀನಿಯರ್ ವಿದ್ಯಾರ್ಥಿನಿಯಾಗಿ ಮೂಡಬಿದಿರೆಯ ಯೆನಪೋಯದಲ್ಲಿ ಓದುತ್ತಿದ್ದರು.
ಬಡ ಕುಟುಂಬದಿಂದ ಬಂದ ವಿದ್ಯಾರ್ಥಿನಿಯ ಮೇಲೆ ಪೋಷಕರು ಅವಳ ಮೇಲೆ ಉತ್ತಮ ಭವಿಷ್ಯದ ನಿರೀಕ್ಷೆ ಇಟ್ಟುಕೊಂಡಿದ್ದರು.ಆದರೆ ದುರದೃಷ್ಟಕರವಾದ ಅಪಘಾತದಲ್ಲಿ ಭವಿಷ್ಯದ ಕನಸನ್ನು ಅಪಘಾತ ಕಸಿದುಕೊಂಡಿದೆ.ಸಿರಿ ಬೇಗ ಗುಣ ಮುಖವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿರಿಯ ತಂದೆ ಆಟೊ ಮಹೇಂದ್ರ,ತಾಯಿ ಶಿಲ್ಪ, ಸಮಾಜ ಸೇವಕ ಸಂಜಯಗೌಡ,ಎ.ಆರ್.ಅಭಿಲಾಷ್,ಅನಿಲ್ ಮೊಂತೆರೊ,ಅರುಣ್ ಪೂಜಾರಿ,ಸೂರಿ,ರಂಗನಾಥ್ ಚಂದ್ರು,ತನು ಕೊಟ್ಟಿಗೆಹಾರ,ಎ.ಕೆ. ಸಂತೋಷ್ ಮತ್ತಿತರರು ಇದ್ದರು.
