Sunday, August 9, 2026
Homeಜಿಲ್ಲಾಸುದ್ದಿಸಕಲೇಶಪುರ: ಬೀದಿ ಬದಿ ಕಲೆಗೆ ಮನಸೋತ ಶಾಸಕ ಸಿಮೆಂಟ್ ಮಂಜು: ಬಾಲಕನ ಬೆನ್ನು ತಟ್ಟಿ ಪ್ರಶಂಸೆ!

ಸಕಲೇಶಪುರ: ಬೀದಿ ಬದಿ ಕಲೆಗೆ ಮನಸೋತ ಶಾಸಕ ಸಿಮೆಂಟ್ ಮಂಜು: ಬಾಲಕನ ಬೆನ್ನು ತಟ್ಟಿ ಪ್ರಶಂಸೆ!

Telegram Group
Join Now

ಸಕಲೇಶಪುರ: ಬೀದಿ ಬದಿಯಲ್ಲಿ ಬದುಕಿನ ಹೊಟ್ಟೆಪಾಡಿಗಾಗಿ ಕಲೆಗೈಯುವ ಬಡ ಕಲಾವಿದರು ನಡೆಸುವ ಸರ್ಕಸ್, ಚಲನಚಿತ್ರಗಳ ಡ್ಯಾನ್ಸ್ ಪ್ರದರ್ಶನಗಳು ಸೇರಿದಂತೆ ವಿವಿಧ ಕಲಾ ಪ್ರತಿಭೆಗಳು ಶಾಸಕ ಸಿಮೆಂಟ್ ಮಂಜು ಅವರ ಮನಸನ್ನು ಆಳವಾಗಿ ಮುಟ್ಟಿದವು.

ಪ್ರಯಾಣದ ವೇಳೆ ರಸ್ತೆ ಬದಿಯಲ್ಲಿ ಪುಟ್ಟ ಬಾಲಕನೊಬ್ಬ ಡ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಕಂಡ ಶಾಸಕರು ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿದರು. ಆ ಬಾಲಕನನ್ನು ಪ್ರೀತಿಯಿಂದ ಕರೆದು ತಮ್ಮ ಕಾರಿನ ಬಳಿ ನಿಲ್ಲಿಸಿಕೊಂಡು ಆತ್ಮೀಯವಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಬಾಲಕನ ಪೋಷಕರೊಂದಿಗೆ ಮಾತನಾಡಿದ ಶಾಸಕರು, “ಈ ಪುಟ್ಟ ಪ್ರತಿಭೆಯನ್ನು ಶಿಕ್ಷಣದಿಂದ ದೂರ ಮಾಡಬಾರದು. ಕಡ್ಡಾಯವಾಗಿ ಶಾಲೆಗೆ ಕಳುಹಿಸಿ” ಎಂದು ಮನವರಿಕೆ ಮಾಡಿದರು. ಜೊತೆಗೆ ಬಾಲಕನಿಗೆ ಹಣ್ಣು ಹಂಪಲು ನೀಡಿ ಪ್ರೋತ್ಸಾಹಿಸಿ ಮಾನವೀಯತೆ ಮೆರೆದರು.

ಕಲೆಗೂ ಶಿಕ್ಷಣಕ್ಕೂ ಸಮಾನ ಮಹತ್ವ ನೀಡುವ ಮೂಲಕ, ಬೀದಿ ಬದಿಯ ಪ್ರತಿಭೆಗೂ ಭವಿಷ್ಯವಿದೆ ಎಂಬ ಸಂದೇಶವನ್ನು ಶಾಸಕ ಸಿಮೆಂಟ್ ಮಂಜು ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments