ಮೂಡಿಗೆರೆ: ಲಕ್ಷ್ಯ ಕೇರಿಯರ್ ಆಕಾಡೆಮಿ, ಸ್ಟಾರ್ ಆಕಾಡೆಮಿ ಮತ್ತು ಸೂರ್ಯ ಫೌಂಡೇಷನ್ ಅವರ ಸಹಯೋಗದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದ್ದು ಮೂಡಿಗೆರೆಯ ನಳಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶಿಕ್ಷಣ ಚೈತನ್ಯ ಪ್ರಶಸ್ತಿ ಲಭಿಸಿದೆ.

ಹೌದು .. ಶಿಕ್ಷಣ ಕ್ಷೇತ್ರದಲ್ಲಿ ಆಪಾರ ಸೇವೆ,ಉತ್ತಮ ಭೌತಿಕ ಸೌಲಭ್ಯ ಹೊಂದಿರುವ ಮತ್ತು ವಿಶೇಷ ಶೈಕ್ಷಣಿಕ ವಾತಾವರಣ ನಿರ್ಮಿಸಿ ಪ್ರತಿಭಾನ್ವಿತ ಭೋದಕೇತರ ಮುಖೇನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹಾಗೂ ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವ ರಾಜ್ಯದ 15 ಶಾಲೆಗಳನ್ನು ಸ್ವತಃ ಖುದ್ದಾಗಿ ಸಂಸ್ಥೆಗಳೇ ಗುರುತಿಸಿ ಶಿಕ್ಷಣ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂದಿನ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಬದ್ಧತೆ, ಪ್ರಾಮಾಣಿಕತೆ, ನಿಖರತೆ ಇಟ್ಟುಕೊಂಡು ಸಾಗಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಸೂರ್ಯ ಪೌಂಡೆಷನ್ ಸಂಸ್ಥಾಪಕ ಸೋಮೇಶ್ ನವೋದಯ ಅಭಿಪ್ರಾಯಪಟ್ಟರು.

ನಗರದ ಲಕ್ಷ್ಯ ಪಿ.ಯು ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ -2025-26 ನೇ ಸಾಲಿನ ಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ವೇಣು ಮಾತನಾಡಿ ಪ್ರತಿಭೆ ಅನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ. ಕೆಲವರಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದರೆ, ಮತ್ತೆ ಕೆಲವರಿಗೆ ತರಬೇತಿ, ಪರಿಶ್ರಮದಿಂದ ಬರುತ್ತದೆ. ಅದನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡಬೇಕಷ್ಟೇ ಎಂದು ಹೇಳಿದರು.
ಮಾನಸಿಕ ಪ್ರತಿಭೆ, ಜ್ಞಾಪಕ ಶಕ್ತಿ, ತರ್ಕಬದ್ಧ ಯೋಚನೆ, ಕೇಳಿದ್ದನ್ನು ಯಥಾವತ್ತಾಗಿ ಹೇಳುವುದು, ಪ್ರಾಮಾಣಿಕತೆ, ಸತ್ಯವನ್ನು ಹೇಳುವುದು, ನಿಷ್ಟುರವಾಗಿ ನಡೆದುಕೊಳ್ಳುವುದರ ಜತೆಗೆ ಒಳ್ಳೆಯದು, ಕೆಟ್ಟದ್ದು ಎಂಬುದನ್ನು ನಿಖರವಾಗಿ ತಿಳಿಯುವ ಪ್ರಯತ್ನ ಮಾಡಬೇಕು. ಹುಟ್ಟಿನಿಂದಲೇ ಪ್ರತಿಭೆಯನ್ನು ಕರಗತ ಮಾಡಿಕೊಂಡವರು ಮುಂಚೂಣಿಯಲ್ಲಿದ್ದರೆ, ತರಬೇತಿ, ಬದ್ಧತೆ, ಧೈಯ, ಸ್ಥೈರ್ಯದಿಂದ ಕಲೆಯನ್ನು ಕರಗತ ಮಾಡಿಕೊಳ್ಳುವವರೂ ಅದ್ವಿತೀಯ ಸಾಧನೆ ಮಾಡುತ್ತಾರೆ. ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ್ಯ ಅಕಾಡೆಮಿಯ ಧರ್ಮ ಮಾತನಾಡಿ ಸತತ ಪ್ರಯತ್ನ, ಬದ್ಧತೆ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ವಿಶ್ವದಲ್ಲೇ ಭಾರತೀಯರು ಅತಿ ಬುದ್ಧಿವಂತರು, ಪ್ರಜ್ಞಾವಂತರಾಗಿದ್ದಾರೆ. ಆದರೆ, ಕೀಳರಿಮೆ ಹಾಗೂ ಮಡಿವಂತಿಕೆಯಿಂದ ಬದುಕುತ್ತಾರೆ. ಇದರಿಂದಾಗಿ ಹೆಚ್ಚಿನ ಸಾಧನೆ ಮಾಡಲು ಆಗುತ್ತಿಲ್ಲ. ಪಾಶ್ಚಿಮಾತ್ಯರು ಭಾರತೀಯರಂತೆ ಹೆಚ್ಚಿನ ಬುದ್ದಿವಂತರಲ್ಲದಿದ್ದರೂ, ಯಾವುದೇ ಕೆಲಸವನ್ನಾದರೂ ನಿಷ್ಠೆ ಪ್ರಾಮಾಣಿಕತೆಯಿಂದ ಮಾಡುತ್ತಾರೆ. ಎಂದರು.
ಪ್ರಶಸ್ತಿ ಸ್ವೀಕರಿಸಿ ಬಳಿಕ ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿದ ನಳಂದ ಆಂಗ್ಲ ಮಾಧ್ಯಮ ಶಾಲೆ ನಿರ್ದೇಶಕ ಗಣೇಶ್ ಗೌಡ ಟಿ.ಏನ್, ನಾವು ಮಾತ್ರ ನಿಗದಿಯಾದ ಕೆಲಸವನ್ನು ಬಿಟ್ಟು ಬೇರೆ ಕಡೆಗೆ ಮೂಗು ತೂರಿಸುವುದನ್ನು ಪ್ರದರ್ಶಿಸುತ್ತೇವೆ. ಪರಿಣಾಮ ಕೆಲವರು ಹಿಂದೆ ಬಿದಿದ್ದಾರೆ ಎಂದು ಅಭಿಪ್ರಾಯ ಪಟ್ಟರು.ಬದ್ಧತೆ, ಪ್ರಾಮಾಣಿಕತೆ ಇದ್ದರೆ ಗುರಿ ಸಾಧ್ಯ
ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಗೇಟ್ ಕೀಪರ್, ಶಿಕ್ಷಕ ವೃಂದ, ಮುಖ್ಯಸ್ತರು. ದೈಹಿಕ ಶಿಕ್ಷಕರ ಹಾಗೂ ಎಲ್ಲರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಅವರ ಶ್ರಮ ಇಲ್ಲಿಯವರೆಗೆ ತಂದಿದೆ ಎಂದರು.
ಈ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ್ದು, ಆಹ್ವಾನಿಸಿ ಗೌರವಿಸಿದ ತಮಗೆಲ್ಲರಿಗೂ ಶಾಲೆಯ ಆಡಳಿತ ಮಂಡಳಿ ವತಿಯಿಂದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ಅರ್ಪಿಸಿದರು
ಈ ಸಂಧರ್ಭದಲ್ಲಿ ಅಂತಾರಾಷ್ಟ್ರೀಯ ಮೈಂಡ್ ಕೋಚ್ ವೇಣು,ಗಂಗೋತ್ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದಗಂಗಯ್ಯ ಲಕ್ಷ್ಯ ಆಕಾಡೆಮಿ ಅಧ್ಯಕ್ಷ ಧರ್ಮ, ಚಲನಚಿತ್ರ ನಟ ನಿರ್ಮಾಪಕ ಗಂಡಸಿ ಸದಾನಂದ, ಕಾರ್ಯದರ್ಶಿ ಶ್ರೀಧರ್, ಸೂರ್ಯ ಫೌಂಡೇಷನ್ ಅಧ್ಯಕ್ಷ ಸೋಮೇಶ್ ನವೋದಯ ಮತ್ತು ಶಿಕ್ಷಕ ಪ್ರತಿಭಾ ಅಧ್ಯಕ್ಷ ಸಿ. ಮಹೇಶ್, ನಳಂದ ಶಾಲೆ ಮುಖ್ಯೋಪಾದ್ಯಾಯಿನಿ ಶ್ರೀಮತಿ ಡಾಲಿ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ :ಪುನೀತ್ ಕಡಿದಾಳು
9483811948
