Sunday, August 16, 2026
Homeಕ್ರೈಮ್ಚಿಕ್ಕಮಗಳೂರು: ಹೋಂ ಸ್ಟೇನಲ್ಲಿ ಮಹಿಳೆ ಜೊತೆ ತಂಗಿದ್ದ ಆರೋಪ: CDA ಮಾಜಿ ಅಧ್ಯಕ್ಷ ಆನಂದ್ ಗೆ...

ಚಿಕ್ಕಮಗಳೂರು: ಹೋಂ ಸ್ಟೇನಲ್ಲಿ ಮಹಿಳೆ ಜೊತೆ ತಂಗಿದ್ದ ಆರೋಪ: CDA ಮಾಜಿ ಅಧ್ಯಕ್ಷ ಆನಂದ್ ಗೆ ಕಪಾಳಮೋಕ್ಷ!

Telegram Group
Join Now

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ಎಂಬುವರು ಮಹಿಳೆ ಜೊತೆ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದ ಆರೋಪ ಹಿನ್ನೆಲೆಯಲ್ಲಿ ಹತ್ತಾರು ಯುವಕರ ಜೊತೆ ಗ್ರಾಮಸ್ಥರು ದಾಳಿ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆ.

ಸೊಸೈಟಿಯಲ್ಲಿ ಕೆಲಸ ಮಾಡುವವರ ಜೊತೆಗೆ ಸಂಬಂಧ ಇದೆ ಎಂದು ಆನಂದ್ ನನ್ನು ಹಿಂಬಾಲಿಸಿ ಚಿಕ್ಕಮಗಳೂರು-ಕಡೂರು ಮಾರ್ಗದ ಬಳಿ ಇರುವ ಹೋಮ್ ಸ್ಟೇಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತಾವರ ಮೂಲದ ವಿಧವಾ ಮಹಿಳೆ ಜೊತೆ ಕೆಲ ವರ್ಷಗಳಿಂದ ಅಕ್ರಮ ಸಂಬಂಧ ಇಟ್ಟುಕೊಂಡು ಓಡಾಡುತ್ತಿದ್ದರು ಎಂಬ ಮಾಹಿತಿ ದೊರೆತಿದ್ದು ಹಾಗಾಗಿ ಹೋಂ ಸ್ಟೇಗೆ ಹೋಗಿ ಕೊಠಡಿಗಳನ್ನ ಚೆಕ್ ಮಾಡಿದ ಗ್ರಾಮಸ್ಥರು ಈ ವೇಳೆ ಹತ್ತಾರು ಯುವಕರ ಜೊತೆ ಗ್ರಾಮಸ್ಥರಿಂದ ದಾಳಿ ನಡೆದಿದ್ದು CDA ಮಾಜಿ ಅಧ್ಯಕ್ಷ ಆನಂದ್ ಗೆ ಕಪಾಳಮೋಕ್ಷ ಮಾಡಿದ್ದಾರೆ.

ಪ್ರಕರಣ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments