ಚಿಕ್ಕಮಗಳೂರು : ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಇತಿಹಾಸ ಪ್ರಸಿದ್ಧ ದುರ್ಗಾಂಭ ದೇವಿ ಅಂತರಗಟ್ಟೆ ಜಾತ್ರಾ ಮಹೋತ್ಸವ ವೇಳೆ ಅಪಘಾತ ಸಂಭವಿಸಿದೆ. ಈ ದೊಡ್ಡ ಜಾತ್ರೆಗೆ ಭಕ್ತರು ಸಾಂಪ್ರದಾಯಿಕವಾಗಿ ಎತ್ತಿನಗಾಡಿಗಳಲ್ಲಿ ತೆರಳುತ್ತಿದ್ದರು.
ಹೌದು .. ಇತಿಹಾಸ ಪ್ರಸಿದ್ಧ ದುರ್ಗಾಂಭ ದೇವಿ ಅಂತರಗಟ್ಟೆ ಜಾತ್ರಾ ಮಹೋತ್ಸವ ವೇಳೆ ಬೈಕ್ ಮೇಲೆ ಹತ್ತಿದ ಎತ್ತಿನ ಗಾಡಿ ಬೈಕ್ ಸವಾರನ ತಲೆ ಹಿಂಬದಿಗೆ ಹೊಡೆದ ಎತ್ತಿನಗಾಡಿ ನೊಗ ಈ ಘಟನೆ ನಡೆದಿದ್ದು ತರೀಕೆರೆ ತಾಲೂಕಿನ ಅಜ್ಜಂಪುರ ಕ್ರಾಸ್ ಬಳಿ ಸಂಭವಿಸಿದೆ.
ತಕ್ಷಣವೇ ಕೆಳಗೆ ಬಿದ್ದ ಬೈಕ್ ಸವಾರ ಆ ವೇಳೆ ಕೂಡ ಅವನ ಮೇಲೆ ಎತ್ತಿನ ಗಾಡಿ ಹತ್ತಿದ ಹರಿದಿದೆ. ಗಾಡಿ ಹಿಂದೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಹೋಗುತ್ತಿದ್ದ ಬೈಕ್ ಸವಾರರು ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣ-ಪುಟ್ಟ ಗಾಯಗಳಾಗಿದ್ದು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಹೀಗಾಗಿ ರಸ್ತೆಯಲ್ಲಿ ಗಾಡಿಯಲ್ಲಿ ಚಲಿಸುವಾಗ ಮೊಬೈಲ್ ಬಳಸುವುದರಿಂದ ನಡೆದ ಅಜಾರುಕತೆ ಎಷ್ಟೇಲ್ಲಾ ಅವಘಡಗಳು ನಡೆಯುತ್ತೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯನ್ನಬಹುದು.
