ಚಿಕ್ಕಮಗಳೂರು : ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಹಾಗೂ ಬಿಇಓ (ಕ್ಷೇತ್ರ ಶಿಕ್ಷಣಾಧಿಕಾರಿ) ಮನೆಗೆ ಹೋಗಿ ಬೈದಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.
ಹೌದು .. ಜನವರಿ 28ರಂದು ರಾತ್ರಿ ಮನೆಯಲ್ಲಿದ್ದ ಕೀಲು ನೋವು, ಉಳುಕಿನ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಕೂಡಲೇ ಕಡೂರು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ದಿದ್ದ ಪೋಷಕರು ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.
ಈಕೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದಳು.ಮೊದಲ ಪ್ರಿಪರೇಟರಿ ಪರೀಕ್ಷೆಯಲ್ಲಿ ಗಾನವಿ 500ಕ್ಕೆ 93 ಅಂಕ ಪಡೆದಿದ್ದಳು. ಜನವರಿ 20 ರಂದು ರಾತ್ರಿ 9.30ರ ಸುಮಾರಿಗೆ ವಿದ್ಯಾರ್ಥಿನಿ ಮನೆಗೆ ಕಡೂರು ಬಿಇಓ ತಿಮ್ಮಪ್ಪ ಮನೆಗೆ ಹೋಗಿ ಬೈದಿದ್ದರು.ಇದರಿಂದ ಸದಾ ಆತಂಕದಲ್ಲೇ ಇದ್ದ ಗಾನವಿ, ಪ್ರಿಪರೇಟರಿಯಲ್ಲಿ ಕಡಿಮೆ ಅಂಕ ಬಂದಿದೆ, ಇನ್ನು ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆಗ್ತೀನಿ ಎಂಬ ಭೀತಿಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನೂ ಮಗಳ ಸಾವಿನ ಬಗ್ಗೆ ಪೋಷಕರು ಯಾವುದೇ ದೂರನ್ನು ನೀಡಿಲ್ಲವಂತೆ. ಹಾಗೆ ಬದುಕಿಗೆ ಮಾರ್ಕ್ಸ್ ಅನಿವಾರ್ಯ ಅಗತ್ಯವಲ್ಲ, ಜೀವಕ್ಕೆ ಬೆಲೆ ಇಲ್ವಾ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.
