ನವದೆಹಲಿ: ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ.. ಅಂತಾ ಆರ್ ಸಿ ಬಿ ಹುಡುಗರು ಕಳೆದ 16 ವರ್ಷಗಳಿಂದ ಬೊಬ್ಬೆ ಹೊಡೆದಿದ್ದೇ ಬಂತು. ಇಲ್ಲಿಯವರೆಗೂ ಕಪ್ ಗೆಲ್ಲಲ್ಲೇ ಇಲ್ಲ. ಆದ್ರೆ RCB
ಹುಡುಗಿಯರು ವುಮೆನ್ ಐಪಿಲ್ ಶುರುವಾದ 2ನೇ ಸೀಸನ್ ನ ಟ್ರೋಪಿ ಗೆದ್ದು ಯ ಕಪ್ RCB ಗೆಲ್ಲಬೇಕೆಂಬ ದಾಹವನ್ನ ಈಡೇರಿಸಿದ್ದಾರೆ. ಡೆಲ್ಲಿ ವಿರುದ್ಧ ನಡೆದ ಪಂದ್ಯವನ್ನ ಚೇಸ್ ಮಾಡುವ ಮೂಲಕ ಆರ್ ಸಿ ಬಿ ಐಪಿಲ್ ಕೀರಿಟವನ್ನ ಮುಡಿಗೇರಿಸಿಕೊಂಡಿದೆ.

ಮೊದಲು ಬ್ಯಾಟ್ ಬೀಸಿದ ಡೆಲ್ಲಿ ತಂಡ 18.3 ಒವರ್ ಗಳಲ್ಲಿ 113 ರನ್ ಕಲೆ ಹಾಕಿ ಸರ್ವ ಪತನ ಕಂಡಿತು. ಶಫಾಲಿ 44, ಲ್ಯಾನಿಂಗ್ 23 ರನ್, ರಾಧಾ 12 ಗಳಿಸಿದನ್ನ ಬಿಟ್ರೆ ಬೇರೆ ಯಾವ ಆಟಗಾರ್ತಿಯರು ಎರಡಂಕಿ ಮೊತ್ತವನ್ನ ದಾಟಲಿಲ್ಲ. ಈ ಸುಲಭ ಮೊತ್ತವನ್ನ ಬೆನ್ನಟ್ಟಿದ ಆರ್ ಸಿ ಬಿ ಆಟಗಾರ್ತಿಯರು ಲೀಲಾಜಾಲವಾಗಿ ಬ್ಯಾಟ್ ಬೀಸಿದ್ರು. ಸ್ಮೃತಿ ಮಂದಾನ 31, ಡಿವೈನ್ 32, ಪೆರ್ರಿ 35, ರೀಚಾ 15 ರನ್ ಗಳಿಸಿ ಆರ್ ಸಿ ಬಿ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 3 ಬಾಲ್ ಗಳು ಇರುವಂತೆಯೇ ಟ್ರೋಪಿ ಗೆದ್ದು ಇತಿಹಾಸ ನಿರ್ಮಿಸಿದ್ರು.