Saturday, August 8, 2026
Homeಜಿಲ್ಲಾಸುದ್ದಿಬಸರೀಕಟ್ಟೆ ಜಾತ್ರೆ ಪ್ರಯುಕ್ತ ತ್ರಿನೇತ್ರ ಕಲ್ಚರಲ್ ಕ್ಲಬ್ ವತಿಯಿಂದ 'ಜೈ ಹನುಮಾನ್' ತುಳು ನಾಟಕ ಪ್ರದರ್ಶನ

ಬಸರೀಕಟ್ಟೆ ಜಾತ್ರೆ ಪ್ರಯುಕ್ತ ತ್ರಿನೇತ್ರ ಕಲ್ಚರಲ್ ಕ್ಲಬ್ ವತಿಯಿಂದ ‘ಜೈ ಹನುಮಾನ್’ ತುಳು ನಾಟಕ ಪ್ರದರ್ಶನ

Telegram Group
Join Now

ಬಸರೀಕಟ್ಟೆ: ಸ್ಥಳೀಯ ಪ್ರಸಿದ್ಧ ಬಸರೀಕಟ್ಟೆ ಜಾತ್ರೆಯ ಪ್ರಯುಕ್ತ ಫೆಬ್ರವರಿ 7ರ ಶನಿವಾರ ರಾತ್ರಿ 7:30ಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ತ್ರಿನೇತ್ರ ಕಲ್ಚರಲ್ ಕ್ಲಬ್ ವತಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ‘ವಿಧಾತ್ರೀ ಕಲಾವಿದೆರ್ ಕುಡ್ಲ (ರಿ.)’ ತಂಡದಿಂದ ಅದ್ಧೂರಿ ರಂಗ ವಿನ್ಯಾಸದೊಂದಿಗೆ ‘ಜೈ ಹನುಮಾನ್’ ಎಂಬ ತುಳು ಸಿನಿನಾಟಕ ಪ್ರದರ್ಶನಗೊಳ್ಳಲಿದೆ. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನ ಹಾಗೂ ಚಿದಾನಂದ ಅದ್ಯಪಾಡಿ ಅವರ ಸಾರಥ್ಯದಲ್ಲಿ ಈ ನಾಟಕವು ಅದ್ಧೂರಿಯಾಗಿ ಮೂಡಿಬರಲಿದೆ. ಈ ಕಲಾ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಮಿತಿಯ ವಿಜಯ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments