Sunday, February 15, 2026
Homeಕ್ರೈಮ್ಹಾಸನ: ಪ್ರಿಯಕರನ ಜೊತೆ ಸಂಸಾರ ನಡೆಸಲು ಕಥೆ ಕಟ್ಟಿದ ಪ್ರಿಯಾಂಕ ಆಂಟಿ: ರಹಸ್ಯ ಭೇದಿಸಿದ ಪೊಲೀಸರು!

ಹಾಸನ: ಪ್ರಿಯಕರನ ಜೊತೆ ಸಂಸಾರ ನಡೆಸಲು ಕಥೆ ಕಟ್ಟಿದ ಪ್ರಿಯಾಂಕ ಆಂಟಿ: ರಹಸ್ಯ ಭೇದಿಸಿದ ಪೊಲೀಸರು!

ಕೆರೆ ಏರಿ ಮೇಲೆ,ಪ್ರಿಯಾಂಕಾ ಆ ದಿನ ಉಟ್ಟಿದ್ದ ಬಟ್ಟೆ.. ಅಂಡರ್ ವೇರ್.. ಚಪ್ಪಲಿ.. ಬ್ಯಾಗ್.. ! ಇಷ್ಟು ಸಾಕಲ್ವಾ.. ಬದುಕಿಲ್ಲ ಅಂತಾ ಅಂದುಕೊಳ್ಳದಿಕ್ಕೆ.. ಒಂದು ಈ ಬಟ್ಟೆ, ಒಳ ಉಡುಪು.. ಜೋಡಿಸಿಟ್ಟಿರುವ ಚಪ್ಪಲಿ.. ಈ ಎಲ್ಲಾವನ್ನ ನೋಡಿದಾಗ ಏನೋ ಗಡ್ ಬಡ್ ಆಗಿದೆ ಅಂತಾ ಅನ್ನಿಸದೇ ಇರದು.. ಸಾಮಾನ್ಯವಾಗಿ ಈ ದೃಶ್ಯ ನೋಡಿದಾಗ ತಾವೇ ಪ್ರಾಣ ಕಳೆದುಕೊಂಡಿರಬಹುದು ಅಂತಾ ಅನ್ನಿಸುತ್ತೆ.. ಇಲ್ಲಾ ಯಾರಾದ್ರೂ ಪ್ರಿಯಾಂಕ ಜೀವ ತೆಗೆದು ಕೆರೆಗೆ ಬಿಸಾಡಿ ಹೋಗಿರಬಹುದು ಅನ್ನಿಸುತ್ತೆ.. ಇನ್ನೂ ಸ್ವಲ್ಪ ಸ್ಮಾರ್ಟಾಗಿ ಥಿಂಕ್ ಮಾಡಿದ್ರೆ , ಎಷ್ಟೇ ಹುಡುಕಿದ್ರೂ ಕೆರೆಯಲ್ಲಿ ಬಾಡಿ ಸಿಗಲಿಲ್ಲ ಅಂದ್ರೆ, ಇಲ್ಲಿ ಜೀವ ತೆಗೆದು ಇನ್ನೇಲ್ಲಾದ್ರೂ ಹಾಕಿರಬಹುದಾ..? ಅನ್ನೋ ಡೌಟೂ ಬರುತ್ತೆ..

ಯೆಸ್, ಈ ಕಿಲಾಡಿ ಲೇಡಿ ಬದುಕಿಲ್ಲ ಅನ್ನೋದಕ್ಕೆ ಸಿಕ್ಕಿದ್ದ ಸಾಕ್ಷಿಗಳು.! ಹೀಗಾಗಿ ನೂರಕ್ಕೆ ತೊಂಬತ್ತೊಂಬತ್ತರಷ್ಟು ಮಂದಿ ಆಕೆ ಹೋಗೇ ಬಿಟ್ಟಿದ್ದಾಳೆ ಅಂತಾನೇ ಭಾವಿಸಿದ್ರು.. ! ಆದ್ರೆ, ಅಲ್ಲಿ ಆಗಿದ್ದೇ ಬೇರೆ, ಈ ರೀತಿಯಲ್ಲೇ ಎಲ್ಲಾರೂ ಯೋಚ್ನೆ ಮಾಡಲಿ ಅಂತಾನೇ ಈ ಖತರ್ನಾಕ್ ಲೇಡಿ ಹೆಣದಿದ್ದ ಬಲೆ ಇದು. ಕೇವಲ ಆಕೆಯ ಮನೆಯವರನ್ನ ಮಾತ್ರವಲ್ಲ, ಇಡೀ ವ್ಯವಸ್ಥೆಯನ್ನ ಧಿಕ್ಕು ತಪ್ಪಿಸುವ ಕೆಲಸವನ್ನ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪ್ರಿಯಾಂಕ ಮಾಡಿದ್ದಾಳೆ.

ನಿನ್ ಜೀವ ತೆಗೆದುಕೊಂಡಿದ್ಯಾ.. ಅಥವಾ ಯಾರೋ ನಿನ್ನ ಜೀವವನ್ನೇ ತೆಗೆದಿದ್ದಾರೆ ಅಂತಾ ನಮ್ ಪೊಲೀಸ್ರು, ಅಗ್ನಿಶಾಮಕದಳದವ್ರು.. ಸೋಕೋ ಟೀಂ, ದ್ರೋಣ್ ಹಾರಾಟ. ಕರಾವಳಿಯಿಂದ ಬಂದು ಮುಳುಗಿ ಮುಳುಗಿ ಏನೂ ಸಿಕ್ತಿಲ್ಲ ಅಂತಾ ಮುಳುಗು ತಜ್ಞ ಈಶ್ವರ್ ಮಲ್ಪೆ ಸಾಹಸ.. ಸ್ಥಳಕ್ಕೆ ಓಡೋಡಿ ಬಂದು ಎಸ್ಪಿ ಶುಭನ್ವಿತಾ ಮೇಡಂ ಅವರ ಓಡಾಟ.. ಅಬ್ಬಬ್ಬಾ.. ಒಂದಾ.. ಎರಡಾ.. ಇಷ್ಟೆಲ್ಲಾ ರಗಳೆ ಕೊಟ್ಟು, ನಿನ್ ಮಾತ್ರ ಡೆವಿಡ್ ಜೊತೆ ‘ರಂಗಿನಾಟ’ ಆಡೋಕೆ ಹೋಗಿದ್ದು ಎಷ್ಟು ಸರಿ ಪ್ರಿಯಾಂಕಾ..?

ಥತ್ತೇರಿ.. ಗಂಡನ ಜೊತೆ ಬದ್ಕೋಕೆ ನಂಗೆ ಇಷ್ಟವಿಲ್ಲ.. ನನ್ ಗಂಡನ ಫ್ರೆಂಡ್ ಡೇವಿಡ್ದೇ ಬೇಕು ಅಂತಾದ್ರೆ ಒಂದ್ ಮಾತುಕತೆ ಮಾಡಿ ಡೈವರ್ಸ್ ತಗೊಂಡ್ ಅವ್ನು ಜೊತೆ ಹೋಗೋದಲ್ಲಮ್ಮ..! ಅದ್ನ ಬಿಟ್ಟು ಆ ಕಡೆ, ಗಂಡನ ಮನೆಯವರಿಗೆ ಟೆನ್ಷನ್ ಕೊಟ್ಟು, ಈ ಕಡೆ, ನಿನ್ ತವರು ಮನೆಯವರನ್ನ ಗೋಳ್ ಹೊಯ್ಕಂಡ್, ಸಂಬಂಧಿಕರು-ಫ್ರೆಂಡ್ಸ್ -ಸ್ಥಳೀಯರು ಹೀಗೆ ಇದ್ದ ಬದ್ದವರ ಪುಕ್ಸಟ್ಟೆ ತಲೆಗೆ ಹುಳ ಬಿಟ್ಟು .. ನಿನ್ ಮಾತ್ರ ನಿನ್ನ ಪ್ರಿಯಕರನ ಜೊತೆ ಹಾಯಾಗಿ ‘ಎಂಜಾಯ್’ ಮಾಡೋಕೆ ಹೋಗಿದ್ಯಾ ಅಂದ್ರೆ ಏನ್ ಹೇಳ್ ಬೇಕು ಗುರೂ..?

ಬರೀ ಇಷ್ಟಲ್ಲದೇ ಪೊಲೀಸರು ದೂರು ತಗೊಳ್ತಿಲ್ಲ ಅಂತಾ ಖಾಕಿ ಬಗ್ಗೆಯೇ ಎಸ್ಪಿ ಬಳಿ ದೂರು ಹೇಳಿ, ಅವ್ರನ್ನ ವಿಲನ್ ಮಾಡಿಸಿದ ಕ್ರೆಡಿಟ್ಟು ನಿಂಗೆ ಸಲ್ಲುತ್ತೆ.. ಪಾಪ..! ನಿಮ್ ಕಡೆಯವರು , ಏನೋ ನಿಂಗೆ ಆಗಬಾರದು ಆಗಿದೆ, ಅಂತಾ ನಿನ್ ಮೇಲೆ ನಂಬಿಕೆ ಇಟ್ಟು, ಪೊಲೀಸರ ವಿರುದ್ಧವೇ ಕೆಂಡಕಾರಿದ್ರು. ಅವ್ರು ಅಂದುಕೊಂಡಂಗೆ ನಿಂಗೇನಾದ್ರೂ ಆಗಿದ್ರೆ, ಅವ್ರು ಹಾರಾಟ, ಹೋರಾಟಕ್ಕೂ ಒಂದು ಅರ್ಥ ಇರ್ತಾ ಇತ್ತು.. ಇದ್ರಲ್ಲಿ ಅವರ ತಪ್ಪೇನು ಇಲ್ಲ ಬಿಡು.. ನಿನ್ ಮೇಲೆ ಇದ್ದ ನಂಬಿಕೆ ಅವ್ರನ್ನ ಹಾಗೇ ಮಾಡಿಸಿದೆ, ಅಲ್ದೇ ಅದು ಸಹಜ ಕೂಡ.! ಆದ್ರೆ ನೀನು ಅವರಿಟ್ಟ ನಂಬಿಕೆಗೆ ಮೋಸ ಮಾಡ್ಬಿಟ್ಟೆ ಅಲ್ವೇನಮ್ಮಾ..?

ಅದೇನೆ ಇರಲಿ, ನಿನ್ ಚಾಪೆ ಕೆಳಗೆ ನುಗ್ಗಿದ್ರೆ, ನಮ್ ಖಾಕಿ ರಂಗೋಲಿ ಕೆಳಗೆ ನುಗ್ಗೋರು ಅನ್ನೋದನ್ನ ಸಾಬೀತು ಮಾಡಿದ್ದಾರೆ.. ನೀನು ಬಿಚ್ಚಿ ಹಾಕಿದ ಅಂಡರ್ ವೇರ್ ನೋಡ್ಕೊಂಡು ಒಂದ್ ಕಡೆ ಸುಮ್ನೆ ಕೂರಲಿಲ್ಲ ಪೊಲೀಸ್ರು..! ಬದಲಾಗಿ ತೆರೆಮರೆಯೂ ಏನ್ ಮಾಡ್ಬೇಕು ಅನ್ನೋ ಕಲೆಯನ್ನ ಚೆನ್ನಾಗಿಯೇ ಕರಗತ ಮಾಡಿಕೊಂಡಿರೋ ನಮ್ ಖಾಕಿ, ನಿನ್ನ ಹೈಡ್ರಾಮಾವನ್ನೆಲ್ಲಾ ಬಯಲು ಮಾಡಿದ್ದಾರೆ.! ನಿನ್ನ ಪ್ರಿಯಕರ ಡೇವಿಡ್ ಮನೆಗೆ ಬಂದು ನಿನ್ನ ರೆಡ್ ಹ್ಯಾಂಡಾಗಿ ಲಾಕ್ ಮಾಡಿದ್ದಾರೆ…
ನಿನ್ನ ನವರಂಗಿ ಆಟವನ್ನ ಇಡೀ ರಾಜ್ಯ ನೋಡಿದೆ..! ನಿನ್ನೆ ಛೇ.. ಏನಾಯ್ತೋ ಅಂಥಾ ಮರಗುತ್ತಿದ್ದ ಜನ್ರು, ಇಂದು ಛಿ..ಥೂ ಅಂತಾ ಉಗೀತಾ ಇದ್ದಾರೆ.. ಬೇಕಾ ಇಂಥಾ ಬಂಡ ಬಾಳು..!ನಿನ್ನಿಂದ ಎಷ್ಟು ಜನರ ಸಮಯ ವ್ಯರ್ಥ..! ಇಡೀ ವ್ಯವಸ್ಥೆಯನ್ನ ದಿಕ್ಕು ತಪ್ಪಿಸಿದ ನಿನ್ನಿಂದ, ನಾಳೆ ದಿನ ಯಾರಿಗಾದ್ರೂ ನಿಜವಾಗಿಯೂ ಅನ್ಯಾಯವಾದ್ರೂ ಹಳದಿಗಣ್ಣಿನಿಂದ ನೋಡೋ ಹಾಗಾಗಿದೆ.. !

ಅಂದಾಗೆ, ನಿಂಗಂತೂ ಬುದ್ದಿಯಿಲ್ಲ, ಇನ್ನಾ ನಿನ್ನ ಪ್ರಿಯಕರ, ಸೋ ಕಾಲ್ಡ್ ನಿನ್ನ ಪತಿರಾಯನ ಸ್ನೇಹಿತ ಡೇವಿಡ್ ಎಂಬ ‘ಮಹಾಶೂರ’ ನಿಗೂ ಬುದ್ದಿ ಇರಲಿಲ್ವಾ..? ಸ್ನೇಹಿತ ಅನ್ನೋ ಪದಕ್ಕೆ ಕಳಂಕ ತರೋ ಕೆಲಸವನ್ನ ನೀವಿಬ್ಬರು ಮಾಡಿದ್ದೀರಿ. ! ನಿನ್ನೆ ಕೆರೆ ಬಳಿ ಬಂದು ನಿನಗೋಸ್ಕರ ಕಣ್ಣೀರು ಹಾಕುತ್ತಿದ್ದ ನಿನ್ ಗಂಡನಿಗೆ ಇಂದು ನಿನೆಷ್ಟು ಅಸಹ್ಯವಾಗಿ ಕಾಣಿಸುತ್ತೀಯಾ.. ಅನ್ನೋದ್ರ ಅರಿವಾದ್ರೂ ನಿನಗೆ ಇದ್ಯಾ..? ನಿನ್ನ ಗಂಡ, ನಿಮ್ಮ ಕುಟುಂಬ, ಈ ವ್ಯವಸ್ಥೆಯನ್ನ ಮೂರ್ಖರನ್ನಾಗಿಸೋ ನಿಮ್ಮ ಕಪಟನಾಟಕ ಕೊನೆಗೂ ಬಯಲಾಗಿದೆ. ಇಡೀ ಸಮಾಜದ ಮುಂದೆ ನೀವುಗಳು ಬೆತ್ತಲಾಗಿದ್ದೀರಿ ಅಷ್ಟೇ.!

ನ್ಯೂಸ್ ಡೆಸ್ಕ್, ಪಬ್ಲಿಕ್ ಇಂಪ್ಯಾಕ್ಟ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!