ಕೊಟ್ಟಿಗೆಹಾರದಲ್ಲಿ ಡ್ರೈವಿಂಗ್ ಸ್ಕೂಲ್ ಕಾರ್ ರಸ್ತೆ ಮಧ್ಯ ನಿಲ್ಲಿಸಿ ಟಿಫನ್‌ಗೆ ತೆರಳಿದ ಕುಟುಂಬ ಅರ್ಧ ಗಂಟೆ ಸಂಚಾರ ಅಡಚಣೆ ಆದರೂ ಕ್ರಮ ಕೈಗೊಳ್ಳದ ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಹೌದು .. ಕೊಟ್ಟಿಗೆಹಾರದಲ್ಲಿ ಡ್ರೈವಿಂಗ್ ಸ್ಕೂಲ್ ಕಾರ್ ಒಂದು ರಸ್ತೆ ಮಧ್ಯ ನಿಲ್ಲಿಸಿ ಟಿಫನ್‌ಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರು ರಸ್ತೆ ಮಧ್ಯ ನಿಂತಿದ್ದರಿಂದ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

ಕಡೂರು ಮೂಲದ ಡ್ರೈವಿಂಗ್ ಸ್ಕೂಲ್‌ಗೆ ಸೇರಿದ ಕಾರು ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಕೊಟ್ಟಿಗೆಹಾರದಲ್ಲಿ ರಸ್ತೆ ಮಧ್ಯ ನಿಲ್ಲಿಸಲಾಗಿದೆ. ಕುಟುಂಬ ಸಮೇತ ಪ್ರಯಾಣಿಸುತ್ತಿದ್ದವರು ಹೋಟೆಲಿಗೆ ತೆರಳಿ ಟಿಫನ್ ಮಾಡಿರುವುದಾಗಿ ತಿಳಿದುಬಂದಿದೆ.

ಸಂಚಾರ ನಿಯಮಗಳನ್ನು ಕಲಿಸುವ ಸಂಸ್ಥೆಯೇ ನಿಯಮ ಉಲ್ಲಂಘನೆ ಮಾಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಗಸ್ತು ತಿರುಗುತ್ತಿದ್ದ ಟ್ರಾಫಿಕ್ ಪೊಲೀಸ್ ವಾಹನ ಕಾರನ್ನು ಗಮನಿಸಿದ್ದರೂ ಪ್ರಕರಣ ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಿಯಮ ಬೋಧಿಸುವವರೇ ನಿಯಮ ಉಲ್ಲಂಘನೆ ಮಾಡಿದ್ರೆ ಅಧಿಕಾರಿಗಳಿಂದ ಕ್ರಮ ಯಾವಾಗ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
