ಮೂಡಿಗೆರೆ: ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಊಹಾಪೋಹಗಳಿಗೆ ಸಾರ್ವಜನಿಕರು ಭಯ ಬಿದಿದ್ದು ವಿಮಾನ ಹಾರಾಟದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಇತ್ತೀಚೆಗೆ ಕಳಸದಲ್ಲಿ ಕಂಡು ಬಂದ ವಿಮಾನ ಹಾರಾಟ ಜನತೆಯಲ್ಲಿ ಬೆಚ್ಚಿ ಬೀಳಿಸಿದ್ದು. ವಿಮಾನ ಹಾರಾಟದ ಉಹಾಪೊಹಗಳಿಗೆ ತೆರೆ ಬಿದ್ದಿದೆ.
ಮೂಡಿಗೆರೆ,ಬೇಲೂರು, ಚಿಕ್ಕಮಂಗಳೂರು , ಬಾಳೆಹೊನ್ನೂರು ಮತ್ತು ಕಳಸ ಎನ್ಆರ್ ಪುರ ವ್ಯಾಪ್ತಿಯಲ್ಲಿ ನಿಗೂಢ ಲಘು ವಿಮಾನ ಒಂದು ಅತಿ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿರುವುದು
ಬಾಂಬ್ ದಾಳಿ ದೇಶ ವಿರೋಧಿಗಳ ಕೃತ್ಯ ಸೇರಿದಂತೆ ಆನೇಕ ವಿಚಾರಗಳು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಸಂಶಯ ಕಾರಣವಾಗಿದ್ದು ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು,ಇಲ್ಲಿನ ಯಾವುದೇ ಇಲಾಖೆಗಳಲ್ಲಿ ಈ ವಿಮಾನ ಹಾರಾಟದ ಕುರಿತಾಗಿ ಯಾವುದೇ ಮಾಹಿತಿ ಇರಲಿಲ್ಲ ಸರ್ಕಾರಿ ಇಲಾಖೆಗಳ ವತಿಯಿಂದ ಯಾವುದೇ ಸರ್ವೆ ಕಾರ್ಯ ನಡೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಸಂಶಯಗಳಿಗೆ ತೆರೆ
ಖನಿಜ ನಿಕ್ಷೇಪಗಳ ಹೊಂದಿರುವ ಪ್ರದೇಶವನ್ನು ಗುರುತಿಸುವ ಸಲುವಾಗಿ ಭಾರತ ಸರ್ಕಾರದಿಂದ ವಾಯುಗಾಮಿ ಭೂ ಭೌತಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂಬ ವಿಚಾರ ಲಭಿಸಿದ್ದು . ಸ್ಪಷ್ಟ ಭೂವೈಜ್ಞಾನಿಕ ಸಾಮರ್ಥ್ಯ ಓಜಿಪಿ ಪ್ರದೇಶಗಳಲ್ಲಿ ಖನಿಜ ನಿಕ್ಷೇಪಗಳ ಉದ್ದೇಶದ ಪ್ರದೇಶವನ್ನು ಗುರುತಿಸುವ ಸಲುವಾಗಿ ಜುಲೈ 31ರವರೆಗೆ ವೈಮಾನಿಕ ಸಮೀಕ್ಷೆ ಮುಂದುವರೆಯಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಸಂಶಯಸ್ಪದವಾಗಿ ಹಾರಾಡಿದ ವಿಮಾನದ ಮಾಹಿತಿ ಯಾವದು ಎಂಬ ಸಾರ್ವಜನಿಕರ ಪ್ರಶ್ನೆಗೆ ಇಲ್ಲಿದೆ ಉತ್ತರ ಹೌದು ಅನೇಕ ಸಂಶಯಗಳಿಗೆ ಕಾರಣವಾಗಿದ್ದ ವಿಮಾನ ಮೂಡಿಗೆರೆ, ಚಿಕ್ಕಮಂಗಳೂರು, ಬೇಲೂರಿನಲ್ಲಿ ಕಾಣಿಸಿಕೊಂಡ ಸೆಸ್ನ ಕಾರವನ್ 208 ಬಿ ಎಂಬ ಸಣ್ಣ ವಿಮಾನವನ್ನು ವಿಶೇಷವಾಗಿ ಭೂಗರ್ಭ ಭೌತಿಕ ಸಮೀಕ್ಷೆ ನಡೆಸಲು ಬಳಸಲಾಗುತ್ತಿದೆ ಈ ವಿಮಾನದ ವಿಶೇಷ ಹಿಂಭಾಗದಲ್ಲಿ ಇರುವ ಉದ್ದವಾದ ಸೂಜಿ ಮಾದರಿಯ ಸಾಧಕ ಇದನ್ನು ಮ್ಯಾಗ್ನಟೋ ಮೀಟರ್ ಸಿಮ್ಟಗರ್ ಎಂದು ಕರೆಯುತ್ತಾರೆ ಇದು ಭೂಮಿಯ ಚುಂಬಕಕ್ಷೇತ್ರದ ಬದಲಾವಣೆಗಳನ್ನು ಹಳೆಯಲು ಬಳಸಲಾಗುತ್ತದೆ ಇದು ಕಡಿಮೆ ಎತ್ತರದಲ್ಲಿ ಹಾರುತ್ತದೆ. ಗ್ರೀಟ್ ಮಾದರಿಯಲ್ಲಿ ಒಂದು ಪ್ರದೇಶವನ್ನು ಹಲವು ಬಾರಿ ಸುತ್ತುವ ಸಾಮರ್ಥ್ಯ ಹೊಂದಿದೆ
