ಮೂಡಿಗೆರೆ: ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಹಾಗೂ ಟೆರ್ರಾ ಈಕೋ ಪ್ರೆನ್ಯೂಸರ್ಸ್ ಖರೀದಿದಾರರ ಹಾಗೂ ಮಾರಾಟಗಾರರ ಸಭೆಯು ಮೂಡಿಗೆರೆ ಮಹಿಳಾ ರೈತ ಉತ್ಪಾದಕ ಕಂಪನಿ ನಿಯಮಿತ,ಕಳಸ ಬುಡಕಟ್ಟು ರೈತ ಉತ್ಪದಕಾ ಸಂಘ,ಧನಲಕ್ಷ್ಮೀ ಗಿರಿಜನ ಕಾಫಿ ಬೆಳೆಗಾರರ ಸಂಘ,ಗಡಿಗೇಶ್ವರ ರೈತ ಉತ್ಪಾದಕ ಕಂಪನಿ ನಿಯಮಿತ,ಗಿರಿ ಸಿರಿ ಸಂಜೀವಿನಿ ಮಹಿಳಾ ರೈತ ಉತ್ಪಾದಕ ನಿಯಮಿತ ಇವರ ಸಹಯೋಗದಲ್ಲಿ ಪಟ್ಟಣದ ಪಂಚವಟಿ ಸಭಾಂಗಣದಲ್ಲಿ ನಡೆಯಿತು.

ಸುಮಾರು 3500 ಸಣ್ಣ ರೈತರು ಮತ್ತು ಆದಿವಾಸಿ ಕಾಫಿ ತೋಟಗಳ ಉತ್ಪಾದಕತೆ ಹಾಗೂ ಉತ್ಪನ್ನ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಬೆಂಗಳೂರಿನ ಟೆರಾ ಇಕೋಪ್ರೆನಿಯರ್ಸ್ ಸಂಸ್ಥೆಯು ಗುರುವಾರ ಮೂಡಿಗೆರೆಯಲ್ಲಿ ಖರೀದಿದಾರ-ಮಾರಾಟಗಾರರ ಸಭೆಯನ್ನು ಆಯೋಜಿಸಿತು.
ಮೂಡಿಗೆರೆ ಮಹಿಳಾ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಜೊತೆಗಿನ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐಟಿಸಿ , ಸಿಪಿ ಎಕ್ಸ್ಪೋರ್ಟ್ಸ್ ಮತ್ತು ಹೈ ರೇಂಜ್ ಕಾಫಿ ಸಂಸ್ಥೆಗಳ ಪ್ರತಿನಿಧಿಗಳು ಎಫ್ ಪಿ. ಓ. ಗಳ ಮೂಲಕ ಗುಣಮಟ್ಟ ಆಧಾರಿತ ಕಾಫಿ ಖರೀದಿ ಮಾಡುವ ವಿಧಾನಗಳನ್ನು ವಿವರಿಸಿದರು.
ಮೂಡಿಗೆರೆ ಮಹಿಳಾ ಎಫ್, ಪಿ, ಓ,ಜೊತೆಗೆ, ಕಳಸ ಮೂಲದ ಎರಡು ಎಫ್, ಪಿ, ಓ, ಗಳ ಸುಮಾರು 20 ಸದಸ್ಯರು ಮತ್ತು ಪದಾಧಿಕಾರಿಗಳು ಹಾಗೂ ಬಾಳೆಹೊನ್ನೂರು ಮೂಲದ ಒಂದು ಎಫ್,ಪಿ, ಓ,ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ತಮ್ಮ ಕಾಫಿ ಮಾದರಿಗಳನ್ನು ಖರೀದಿದಾರರಿಗೆ ಪ್ರದರ್ಶಿಸಿದರು ಮತ್ತು ಖರೀದಿದಾರರು ಅವುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಿದರು.

ಈ ನಾಲ್ಕು ಎಫ್, ಪಿ, ಓ,ಗಳಿಂದ ಸುಮಾರು 350 ಟನ್ ಕಚ್ಚಾ ಕಾಫಿಯನ್ನು ಮಾರಾಟಕ್ಕೆ ಒದಗಿಸಲಾಯಿತು.
ಟೆರಾ ಇಕೋಪ್ರೆನಿಯರ್ಸ್ ಸಂಸ್ಥೆಯ ಪಾಲುದಾರರಾದ ಡಾ. ಅಶ್ವಿನಿ ಕುಮಾರ್ ಮತ್ತು ಶ್ರೀ ಅವಿನಾಶ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು.
ಈ ಖರೀದಿದಾರ-ಮಾರಾಟಗಾರರ ಸಭೆಯ ಮೂಲಕ FPOಗಳಿಗೆ ಪ್ರಮುಖ ಕಾಫಿ ಖರೀದಿದಾರರೊಂದಿಗೆ ಸಹಕಾರದ ಮೂಲಕ ಹೊಸ ಮಾರುಕಟ್ಟೆಗಳಿಗೆ ತಲುಪುವ ಅವಕಾಶ ದೊರಕಿತು. ಜೊತೆಗೆ, ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸ್ವಯಂಪ್ರೇರಿತ ಸ್ಥಿರತೆಯ ಮಾನದಂಡದಡಿ ಗುಂಪು ಪ್ರಮಾಣೀಕರಣವನ್ನು ಪಡೆದು, ಭಾರತೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನೇರವಾಗಿ ವ್ಯಾಪಾರ ನಡೆಸಲು FPOಗಳು ನಿರ್ಧರಿಸಿವೆ.

ಈ ಸಂದರ್ಭದಲ್ಲಿ ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷೆ ಶೋಭಾ ಕುಮಾರಿ, ಉಪಾಧ್ಯಕ್ಷೆ ಸರೋಜ ಸುರೇಂದ್ರ, ಕಾರ್ಯದರ್ಶಿ ಕೀರ್ತಿ ಕಿರಣ್, ಖಜಾಂಚಿ ಸುಚಿತ ಗಣೇಶ್, ನಿರ್ದೇಶಕರಾದ
ಮಧುರ ಜಯಂತ್,ಸುಜಾತಾ ಪ್ರಸನ್ನ,ಕೌಶಲ್ಯ ಅಶೋಕ್,ಸ್ವರೂಪ ಪ್ರಶಾಂತ್,ದೀಪ್ತಿ ಸುಬ್ರಾಯ,ಸೇರಿದಂತೆ ಸದಸ್ಯರು ಕಾಫಿ ಬೆಳೆಗಾರರು ವ್ಯಾಪಾರಿಗಳು ಉಪಸ್ಥಿತರಿದ್ದರು
ವರದಿ:ಪುನೀತ್ ಕಡಿದಾಳು
9483811948
