Saturday, March 14, 2026
Homeಕ್ರೈಮ್ಕೊಪ್ಪ: ಸುಂಕದಗದ್ದೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ SDMC ಪುರಸ್ಕಾರ

ಕೊಪ್ಪ: ಸುಂಕದಗದ್ದೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ SDMC ಪುರಸ್ಕಾರ

ಕೊಪ್ಪ: ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ 2025-26ನೇ ಸಾಲಿನ ತಾಲೂಕು ಮಟ್ಟದ ಕಿರಿಯ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ ಅತ್ಯುತ್ತಮ ಎಸ್ ಡಿ ಎಂ ಸಿ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರಶಸ್ತಿಯು 50,000 ನಗದು ಬಹುಮಾನವನ್ನು ಒಳಗೊಂಡಿದೆ.

ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಸ್ ಡಿ ಎಂ ಸಿ ಯವರನ್ನು ಮತ್ತು ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಶಿಕ್ಷಕ ಚೌಡ್ಲಾಪುರ ಸೂರಿ ಮಾತನಾಡಿ ಈ ಪ್ರಶಸ್ತಿಯನ್ನು ಪಡೆಯಲು ಸಹಕಾರ ನೀಡಿದ ನಗು ಫೌಂಡೇಶನ್ ನ ದೀಪ್ತಿ ಅವರಿಗೆ, ಪೀಪಲ್ ಫಾರ್ ಪೀಪಲ್ ಟ್ರಸ್ಟ್ ನವರಿಗೆ, ಬೆಂಗಳೂರಿನ ಸುವರ್ಧನ್ ಅವರಿಗೆ, ವಿಶ್ವನಾಥ್ ಗದ್ದೆಮನೆ ಅವರಿಗೆ ಹಾಗೂ ಸ್ಥಳೀಯ ದಾನಿಗಳಿಗೆ, ಸೋಮಶೇಖರ್ ರವರಿಗೆ, ಪ್ರಶಾಂತ್ ಸರ್ ಅವರಿಗೂ, ಮೂಡಿಗೆರೆ ಗಿರೀಶ್ ಅವರಿಗೂ, ಪತ್ರಿಕಾ ಮಿತ್ರ ಬಳಗದವರಿಗೆ, ಎಸ್ ಡಿ ಎಂ ಸಿ ಯವರಿಗೆ, ಹಳೆ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಜನಪ್ರತಿನಿಧಿಯವರಿಗೆ ಮತ್ತು ಸಮಸ್ತ ಸುಂಕದಗದ್ದೆ ಗ್ರಾಮಸ್ಥರಿಗೆ ಮತ್ತು ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡಿದ ಇಲಾಖೆಯ ಅಧಿಕಾರಿ ಬಳಗಕ್ಕೂ ಶಾಲೆಯ ಪರವಾಗಿ ಅನಂತ ಅನಂತ ಕೃತಜ್ಞತೆಗಳು ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!