Saturday, March 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವತಿಯಿಂದ ಟೈಲರ್ ಡೇ ಕಾರ್ಯಕ್ರಮ

ಮೂಡಿಗೆರೆ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವತಿಯಿಂದ ಟೈಲರ್ ಡೇ ಕಾರ್ಯಕ್ರಮ

ಮೂಡಿಗೆರೆ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲೂಕು ನಗರ ಸಮಿತಿ ವತಿಯಿಂದ ಅದ್ದೂರಿ ಟೈಲರ್ ಡೇ ಕಾರ್ಯಕ್ರಮವನ್ನು ಬಳೆಗಾರ ಸಂಘದ ಸಭಾಂಗಣದಲ್ಲಿ ಮಾಡಲಾಯಿತು.

ಆಧುನಿಕ ದಿನಮಾನಗಳಲ್ಲಿ ಟೈಲರ್ ವೃತ್ತಿ ಬಾಂಧವರ ಬದುಕು ಬಹಳ ಸಂಕಷ್ಟದಲ್ಲಿದೆ, ಹೊಲಿಗೆಯ ಕಡೆ ಆಸಕ್ತಿ ಕಡಿಮೆಯಾಗಿದೆ, ರೆಡಿಮೇಡ್ ಬಟ್ಟೆಗಳ ಆಕರ್ಷಣೆಯಿಂದ ವೃತ್ತಿ ಬದುಕಿಗೆ ಸಂಕಷ್ಟ ಎದುರಾಗಿದೆ, ಎಲ್ಲರೂ ಒಗ್ಗಟ್ಟಾಗಿ ಮುಂದುವರೆದು ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅಭಿಪ್ರಾಯ ಪಟ್ಟರು.

ನಗರ ಸಮಿತಿ ಅಧ್ಯಕ್ಷೆ ಶ್ರೀಮತಿ ಉಮಾ ಶಂಕರ್ ಅವರು ಮಾತನಾಡಿ ಜೀವನದ ಕಷ್ಟ ಕಾಲದಲ್ಲಿ ಈ ಟೈಲರಿಂಗ್ ವೃತ್ತಿ ಮಹಿಳೆಯರನ್ನು ಕೈ ಹಿಡಿದಿದೆ, ಈ ವೃತ್ತಿಯಲ್ಲಿ ಮಹಿಳೆಯರ- ಪುರುಷರು ಮೂಡಿಗೆರೆ ಸುತ್ತಮುತ್ತ 300 ರಿಂದ 400 ಜನ ಸ್ವಾವಲಂಬಿಕ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಳೂರು ನೆರವೇರಿಸಿದರು ಮಾತನಾಡಿದರು. ವಿಧಾನ ಪರಿಷತ್ತಿನ ಸದಸ್ಯರು, ಉಪ ಸಭಾಪತಿಗಳಾದ ಎಂ.ಕೆ ಪ್ರಾಣೇಶ್ ರವರು ವೃತ್ತಿಬಾಂಧವರಿಗೆ ಸನ್ಮಾನಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ, ನಗರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾಶಂಕರು ವಹಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ, ಪೂರ್ಣೇಶ್ ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಿವಗೌಡ್ರು, ಸತೀಶ್, ಗಿರೀಶ್, ಗೋಪಾಲ ಶೆಟ್ಟಿ, ಷಣ್ಮುಖ ನಂದ, ಪ್ರಕಾಶ್, ಮಂಜುಳಾ, ಮಂಜು, ಎಂಎಸ್ ನಾಗರಾಜ್, ಸುರೇಶ್ ಸೇರಿ ಟೈಲರ್ ವೃತ್ತಿ ಬಾಂಧವರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪ್ರಸ್ತಾವಿಕ ನುಡಿ ಶ್ರೀಮತಿ ಮಂಜುಳ ಅವರು ಮಾಡಿದ್ರೆ, ಹಾಗೆ ನಿರೂಪಣೆಯನ್ನ ಪೂಜಾ ಟೈಲರ್ ರವರು ನೆರವೇರಿಸಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!