Friday, March 20, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಯುಗಾದಿ ಮುಗಿದ ಬಳಿಕ ಹೊಸ ತೊಡಕು ಸಂಭ್ರಮ: ಕಾಫಿನಾಡಲ್ಲಿ ಖಾರದ ಘಮಲು!

ಚಿಕ್ಕಮಗಳೂರು: ಯುಗಾದಿ ಮುಗಿದ ಬಳಿಕ ಹೊಸ ತೊಡಕು ಸಂಭ್ರಮ: ಕಾಫಿನಾಡಲ್ಲಿ ಖಾರದ ಘಮಲು!

ಚಿಕ್ಕಮಗಳೂರು: ಮಲೆನಾಡಲ್ಲಿ ಯುಗಾದಿ ಬಳಿಕ ಮರುದಿನ ಆಚರಿಸುವ ಹೊಸತೊಡಕಿನ ಸಂಭ್ರಮ ಜೋರಾಗಿದ್ದು, ಸಿಹಿ ಕಹಿ ಸವಿದ ಜನರು ಹಬ್ಬದ ಮಾರನೇ ದಿನ ಖಾರದ ಮಾಂಸ ಊಟ ಸವಿಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಯುಗಾದಿಯ ಸಿಹಿ ನಂತರ ಹೊಸತೊಡಕಿನಲ್ಲಿ ಮಾಂಸ ತೆಗೆದುಕೊಳ್ಳಲು ಚಿಕನ್‌ ಮತ್ತು ಮಟನ್‌ ಅಂಗಡಿಗಳಲ್ಲಿ ಜನರು ಕ್ಯೂ ನಿಂತಿದ್ದನ್ನು ಕಾಣಬಹುದು.

ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಮಟನ್‌ ಬೆಲೆ ಕೆಜಿಗೆ 700 ರಿಂದ 800 ಇದ್ದು ಚಿನ್‌ ಬೆಲೆ 250ರಿಂ 300 ರೂಪಾಯಿಗಳಷ್ಟಿದ್ದೆ. ಮಂಡ್ಯ ಮೈಸೂರು ಬೆಂಗಳೂರು ಭಾಗದಲ್ಲಿ ಈ ದಿನ ಗುಡ್ಡೆ ಮಾಂಸ ಎನ್ನುವ ಜನರು ಚಿಕ್ಕಮಗಳೂರು ನಗರದ ಆದಿ ಶಕ್ತಿನಗರ ಸೇರಿದಂತೆ ಈ ರೀತಿ ಕಂಡುಬರುತ್ತದೆ.

ಆಧುನಿಕತೆಯ ನಡುವೆ ಈ ಸಂಪ್ರದಾಯಗಳು ಮುಂದುವರೆದಿದ್ದು ನಿಜಕ್ಕೂ ಸ್ಥಳೀಯರಲ್ಲಿ ಸಂತಸ ತಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!