ಜಯಪುರ: 1958ರಲ್ಲಿ ಆರಂಭವಾದ ಶೃಂಗೇರಿ ಶಾರದ ಬ್ಯಾಂಕ್, 1960 ರಲ್ಲಿ ಕರ್ನಾಟಕ ಬ್ಯಾಂಕ್ ಆಗಿ ನಾಮಕರಣಗೊಂಡು 66ವರ್ಷಗಳ ಸುಧೀರ್ಘ ಸೇವೆ ನೀಡಿದ್ದು, ಗ್ರಾಹಕರ ಸಹಕಾರದಿಂದ ಲಕ್ಷಾಂತರ ಗ್ರಾಹಕರಿಗೆ ಸೇವೆ ನೀಡುತ್ತಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ ಕುಮಾರ್ ಹೇಳಿದರು.
ಜಯಪುರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಡೆದ 66ನೇ ವಾರ್ಷಿಕ ಸಂಭ್ರಮಾಚಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಬ್ಯಾಂಕ್ ಸಿಬ್ಬಂಧಿಗಳು ಗ್ರಾಹಕರಿಗೆ ತ್ವರಿತವಾಗಿ ಮತ್ತು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದೆ ಎಂದರು.

ಜಯಪುರ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ಜಯಪುರ ಶಾಖೆಯಲ್ಲಿ ವಾರ್ಷಿಕ ಸುಮಾರು 167 ಕೋಟಿ ವ್ಯವಹಾರ ನಡೆಸಲಾಗಿದ್ದು, 118ಕೋಟಿ ಠೇವಣಿ ಸಂಗ್ರಹಿಸಿ. 12ಕೋಟಿ ಸಾಲ ನೀಡಲಾಗಿದೆ. ಠೇವಣಿಗಳಿಗೆ 7.05 ಶೇಕಡ ಬಡ್ಡಿ ನೀಡಲಾಗುತ್ತಿದ್ದು, ಚಿನ್ನಾಭರಣ ಅಡಮಾನ ಸಾಲಕ್ಕೆ 9.34 ಬಡ್ಡಿಯಲ್ಲಿ ಸಾಲ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವೃತ್ತ ವ್ಯವಸ್ಥಾಪಕ ಸುಜಿತ್ ಕುಮಾರ್, ಜಯಪುರ ಕರ್ನಾಟಕ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಚೇತನ್, ಸಿಬ್ಬಂದಿಗಳಾದ ಕಾವ್ಯ, ಹರಿಹರಪುರ ಶಾಖೆಯ ಭಾಸ್ಕರ್ ನರಸಿಂಹ, ಬ್ಯಾಂಕಿನ ಗ್ರಾಹಕರಾದ ಜಯವಂತ ಭಟ್, ಕೌಳಿ ಶ್ರೀನಿವಾಸ್ ಗೌಡ ಮತ್ತಿತ್ತರಿದ್ದರು.
ವರದಿ: ಶಶಿ ಬೆತ್ತದಕೊಳಲು
