Tuesday, August 11, 2026
Homeಜಿಲ್ಲಾಸುದ್ದಿಕೊಗ್ರೆ ಮಾಡ ದೇವಸ್ಥಾನ ಸಮಿತಿ ಅಧ್ಯಕ್ಷ K.R. ಪ್ರಕಾಶ್ ಕುಮಾರ್ʼಗೆ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟದಿಂದ ಸನ್ಮಾನ

ಕೊಗ್ರೆ ಮಾಡ ದೇವಸ್ಥಾನ ಸಮಿತಿ ಅಧ್ಯಕ್ಷ K.R. ಪ್ರಕಾಶ್ ಕುಮಾರ್ʼಗೆ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟದಿಂದ ಸನ್ಮಾನ

Telegram Group
Join Now

ಜಯಪುರ: ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟ ಕೊಗ್ರೆ ಇವರ ಮೂರನೇ ವರ್ಷದ ಯಕ್ಷ ಪಯಣದ ಪ್ರಯುಕ್ತ “ಪಂಜರ ಪಕ್ಷಿ” ಪ್ರೋ ಪವನ್ ಕಿರಣಕೆರೆ ವಿರಚಿತ ಕಾಲ್ಪನಿಕ ಕಥಾನಕವನ್ನು ಕೊಗ್ರೆಯ ಗಣಪತಿ ಸಭಾಭವನದಲ್ಲಿ ಆಡಿ ತೋರಿಸಲಾಯಿತು.

ಈ ವೇಳೆ ಕೊಗ್ರೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಕಲಾ ಪೋಷಕರಾದ ಕೆ ಆರ್ ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಆರ್ ಪ್ರಕಾಶ್ ಕುಮಾರ್ ಹತ್ತೂರಿನ ಸನ್ಮಾನಕ್ಕಿಂತ ಹೆತ್ತೂರಿನ ಸನ್ಮಾನ ಬಹಳ ವಿಶೇಷ, ಸನ್ಮಾನಿಸಿದ ಕ್ಷಣ ಭಾವುಕನಾದೆ ಎಂದರು.


ನಾನು ಬಾಲ್ಯದಿಂದಲೂ ತಾಯಿಯ ಭಕ್ತ. ಈಗ ದುರ್ಗಾಪರಮೇಶ್ವರಿ ತಾಯಿಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈ ಗೌರವ ನನಗಷ್ಟೇ ಅಲ್ಲ ದೇವಸ್ಥಾನದ ಭಕ್ತರಿಗೂ ಸಲ್ಲುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾನಿಗಳಿಂದ ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಿದೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.

ಈ ಸಂಧರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಿತ್ರಕೂಟ ಸಮಿತಿಯ ಶಿವ ಶಂಕರ್ ಸೌತೆಕುಣಿ, ವರ್ಧಮಾನ್ ಜೈನ್, ಕೃಷ್ಣಪೂಜಾರಿ, ಶಾಂತಪ್ಪ, ಕೃಷ್ಣ ಇದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments