Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಗೋಡೌನ್ ಬೀಗ ಮುರಿದು ಕಾಫಿ ಮೂಟೆಗಳ ಕಳುವು!

ಚಿಕ್ಕಮಗಳೂರು: ಗೋಡೌನ್ ಬೀಗ ಮುರಿದು ಕಾಫಿ ಮೂಟೆಗಳ ಕಳುವು!

Telegram Group
Join Now

ಚಿಕ್ಕಮಗಳೂರು: ಕಾಫಿ ಮೂಟೆಗಳನ್ನ ಸಂಗ್ರಹಿಸಿಟ್ಟಿದ್ದ ಗೋಡೌನ್ ಬೀಗ ಮುರಿದು ಕಾಫಿ ಮೂಟೆಗಳನ್ನು ಹೊತ್ತೊಯ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ರುಮನೆ ಗ್ರಾಮದ ಕಾಫಿ ತೋಟವೊಂದರಲ್ಲಿ ನಡೆದಿದೆ.

ಹೌದು .. ಈ ಸಂಬಂಧ ಮಾಲೀಕರು ದೂರು ದಾಖಲಿಸಿದ್ದಾರೆ. ಕೆ.ಪಿ.ಅಣ್ಣೇಗೌಡ ಅವರ ಪುತ್ರ ಕೆ.ಎ. ಹರೀಶ್‌ ಎಂಬುವವರಿಗೆ ಸೇರಿದ 40 ಎಕರೆ ತೋಟದ ಗೋಡೌನ್‌ ನಲ್ಲಿ ಶೇಖರಿಸಿಟ್ಟಿದ್ದ ಕಾಫಿ ಮೂಟೆಗಳ ಪೈಕಿ ಎರಡು ಮೂಟೆ ಕಳವು ಆಗಿದೆ.

ಮಾರ್ಚ್ 17ರ ಸಂಜೆ 6 ಗಂಟೆಯಿಂದ ಮಾರ್ಚ್ 18ರ ಬೆಳಿಗ್ಗೆ 7:30ರ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ. ದೂರಿನಲ್ಲಿ, ಗೋಡೌನ್‌ನಲ್ಲಿ ಒಟ್ಟು 500 ಮೂಟೆ ಕಾಫಿ ದಾಸ್ತಾನು ಮಾಡಲಾಗಿತ್ತು. ಕಳ್ಳರು ಗೋಡೌನ್‌ನ ಸಿಸಿ ಕ್ಯಾಮೆರಾ ವೈರ್ ಕತ್ತರಿಸಿ, ರೋಲಿಂಗ್ ಶಟರ್‌ನ ಬೀಗ ಮುರಿದು ಒಳನುಗ್ಗಿದ್ದಾರೆ. ಬಳಿಕ ತಲಾ 50 ಕೆಜಿ ತೂಕದ ಎರಡು ಕಾಫಿ ಮೂಟೆಗಳನ್ನು ಹೊತ್ತೊಯ್ದಿದ್ದಿದ್ದಾರೆ.

ಸದ್ಯ ಮಲ್ಲಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments