Monday, August 10, 2026
Homeಕ್ರೈಮ್ಮೂಡಿಗೆರೆ: ಬೈಕ್‌ & ಗೂಡ್ಸ್ ಗಾಡಿ ನಡುವೆ ಅಪಘಾತ: ಕುಂಬಾರ ಶೆಟ್ಟಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ...

ಮೂಡಿಗೆರೆ: ಬೈಕ್‌ & ಗೂಡ್ಸ್ ಗಾಡಿ ನಡುವೆ ಅಪಘಾತ: ಕುಂಬಾರ ಶೆಟ್ಟಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ದುರ್ಮರಣ!

Telegram Group
Join Now

ಚಿಕ್ಕಮಗಳೂರು: ಬೈಕ್‌ ಮತ್ತು ಗೂಡ್ಸ್ ಗಾಡಿ ನಡುವೆ ಭೀಕರ ಅಪಘಾತ ಉಂಟಾಗಿದ್ದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಲಕ್ಷ್ಮಿಪುರ ಬಳಿ ನಡೆದಿದೆ.

ಹೌದು .. 57 ವರ್ಷದ ತಿಮ್ಮರಾಜ್ ಶೆಟ್ಟಿ ಮೃತ ದುರ್ದೈವಿ. ಗೂಡ್ಸ್‌ ಗಾಡಿ ಹಿಟ್‌ & ರನ್‌ ಮಾಡುವ ಮೂಲಕ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಮೃತ ತಿಮ್ಮರಾಜ್ ಶೆಟ್ಟಿ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದವರಾಗಿದ್ದು ಕುಂಬಾರ ಶೆಟ್ಟಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕರಾಗಿದ್ದರು. ಹಾಗೆ ಸಮಾಜದ ಅಭಿವೃದ್ಧಿ, ಏಕತೆ ಮತ್ತು ಕಲ್ಯಾಣಕ್ಕಾಗಿ ಅಪಾರ ಸೇವೆ ಸಲ್ಲಿಸಿರುತ್ತಾರೆ.

ಸಂಘದ ಬೆಳವಣಿಗೆಗಾಗಿ ಅವರು ಹಾಕಿದ ಪರಿಶ್ರಮ, ತೋರಿಸಿದ ಮಾರ್ಗದರ್ಶನ ಮತ್ತು ಕೊಟ್ಟ ಪ್ರೋತ್ಸಾಹ
ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿತ್ತು ಎಂಬುದು ಸಂಘ ಸಂಸ್ಥೆಯ ಸದಸ್ಯರು ತಮ್ಮ ಮನದಾಳದ ಮಾತನ್ನು ತಿಳಿಸಿದರು.

ಮೃತ ತಿಮ್ಮರಾಜ್ ಶೆಟ್ಟಿ ಆದರ್ಶಗಳು ಮತ್ತು ಸೇವಾ ಮನೋಭಾವ ಉಳ್ಳವರಾಗಿದ್ದು ಅಪಾರ ಬಂಧು ಮಿತ್ರರು ಇವರನ್ನು ನೆನೆದು ಕಂಬನಿ ಮಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments