ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮುಸ್ಲಿಂ ಸಮುದಾಯದ ಅಪ್ರಾಪ್ತ ಯುವಕ, ಹಿಂದೂ ಅಪ್ರಾಪ್ತ ಹುಡುಗಿಗೆ ರಂಜಾನ್ ಹಬ್ಬದಲ್ಲಿ ನೀನು ಉಪವಾಸ ಮಾಡ್ಬೇಕು, ನಮಾಜ್ ಮಾಡ್ಬೇಕು ಅಂತಾ ಕಂಡಿಷನ್ ಹಾಕಿದ್ನಂತೆ. ಹುಡುಗನ ಆದೇಶದಂತೆ ಹುಡುಗಿ ಮತಾಂತರ ಆಗಿದ್ದಾಳೆ.
ರಂಜಾನ್ ಹಬ್ಬಕ್ಕೂ ಮೊದಲು ಒಂದು ತಿಂಗಳು ನಮಾಜ್ ಮಾಡಿಕೊಂಡು ಉಪವಾಸ ಮಾಡಿದ್ಳಂತೆ. ಈ ಎಲ್ಲಾ ವಿಚಾರಗಳನ್ನ ಹುಡುಗಿಯ ಪೋಷಕರೇ ಹೇಳಿದ್ದಾರೆ ಅಂತಾ ಹಿಂದೂ ಮುಖಂಡರು ಸ್ಫೋಟಕ ಆರೋಪ ಮಾಡಿದ್ದಾರೆ. ಈ ರೀತಿ ಮುಗ್ಧ ಹುಡುಗಿಯರ ತಲೆ ಕೆಡಿಸಿ, ಲವ್ ಜಿಹಾದ್ ಮಾಡಲಾಗ್ತಿದೆ ಅಂತಾ ಆರೋಪಿಸಿದ್ದಾರೆ.
ಈ ಬಗ್ಗೆ ನೊಂದು ಸ್ವತಃ ಹುಡುಗಿ ಪೋಷಕರೇ ದೂರು ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಹುಡುಗನ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಾ ಬಜರಂಗದಳ ಮುಖಂಡ ಅವಿನಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
