ಚಿಕ್ಕಮಗಳೂರು: ನಗರದಲ್ಲಿ ಮಾರ್ಚ್ 27ರಂದು ಶ್ರೀರಾಮನವಮಿ ಹಬ್ಬದ ಪ್ರಯುಕ್ತ ನಗರಸಭೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರಿ ಸುತ್ತೋಲೆಯಲ್ಲಿ ಅದೇಶಿಸಲಾಗಿದೆ.

ಕೋಳಿ, ಕುರಿ, ಮೀನು ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್‌ಗಳನ್ನು ಈ ದಿನದಂದು ತೆರೆಯಬಾರದು. ತಪ್ಪಿದಲ್ಲಿ ಅಂತಹ ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಪೌರಾಯುಕ್ತ ಬಿ.ಸಿ.ಬಸವರಾಜು ಅವರು ತಿಳಿಸಿದ್ದಾರೆ.
